ಗಾಯಾಳುಗಳಿಗೆ ಕರೆದುಕೊಂಡು ಬನ್ನಿ

eshwarsing thakur
Published on

ಬೀದರ್: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆದ ಮಹಾ ಕುಂಭ ಮೇಳದಿಂದ ವಾಪಸ್ ಬರುವಾಗ ಮಹಾರಾಷ್ಟ್ರದ ವಾರ್ದಾ ಬಳಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರನ್ನು ತವರು ಜಿಲ್ಲೆ ಬೀದರ್ ಕರೆದುಕೊಂಡು ಬರಲು ವ್ಯವಸ್ಥೆ ಮಾಡಬೇಕು ಎಂದು ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ಆಗ್ರಹಿಸಿದ್ದಾರೆ.

ಈಚೆಗೆ ನಗರದ ಲಾಡಗೇರಿಯ ಆರು ಜನ ವಾರಣಾಸಿ ಸಮೀಪದ ಅಪಘಾತದಲ್ಲಿ ಮೃತಪಟ್ಟಾಗ ಜಿಲ್ಲೆಯ ಇಬ್ಬರು ಸಚಿವರಾದ ಈಶ್ವರ ಖಂಡ್ರೆ, ರಹೀಮ್ ಖಾನ್, ಎರಡೆರಡು ಸಲ ಮೃತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಆದರೆ ಫೆ.25ರಂದು ವಾರ್ದಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಜನವಾಡದ ದಿಲೀಪ ಕಾಳೇಕರ್ ಮೃತಪಟ್ಟಿದ್ದಾರೆ. 11 ಜನ ಗಾಯಗೊಂಡ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿವರು ಇವರ ಬಗ್ಗೆ ಚಕಾರ ಎತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಅರುಣಾ ಕಾಳೇಕರ್ ಹಾಗೂ ಪ್ರಕಾಶ ತಾಂದಳೆ ಪರಿಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳು ಬಡವರು. ಖಾಸಗಿ ಆಸ್ಪತ್ರೆಯಲ್ಲಿ ಹಣ ಕಟ್ಟುವ ಪರಿಸ್ಥಿತಿಯಲ್ಲಿ ಇಲ್ಲ. ಅವರ ನೆರವಿಗೆ ಧಾವಿಸಬೇಕು. ಮೃತರ ಕುಟುಂಬಕ್ಕೆ ಐದು ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ ಎರಡು ಲಕ್ಷ ರೂ. ಪರಿಹಾರ ನೀಡಬೇಕೆಂದು ಠಾಕೂರ್ ಆಗ್ರಹಿಸಿದರು.

ಪ್ರಮುಖರಾದ ಸಂಜಯ ಘನಾತೆ, ಪ್ರವೀಣ ಸೂರ್ಯನ್, ಸತ್ಯಪ್ರಕಾಶ ಮಹೇಂದ್ರಕರ್, ರಮೇಶ ದೇವತರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net