

ಬೀದರ್: ಹುಲಸೂರ ತಾಲೂಕಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಮಾ.24ರಂದು ಹಿರಿಯ ಹೋರಾಟಗಾರ ಎಂ.ಜಿ. ರಾಜೋಳೆ ಹಮ್ಮಿಕೊಂಡಿರುವ ಪ್ರತಿಭಟನೆಗೆ ಬೆಂಬಲ ನೀಡುವುದಾಗಿ ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
ಹುಲಸೂರ ತಾಲೂಕು ಪ್ರದೇಶವಾಗಿ ರಚನೆಯಾಗುವಲ್ಲಿ ರಾಜೋಳೆ ಅವರ ದಶಕಗಳ ಹೊರಾಟ ಪ್ರತಿಯೊಬ್ಬರಿಗೂ ತಿಳಿದ ವಿಷಯ. ಅವರ ಹೊರಾಟಕ್ಕೆ ಹಿಂದಿನ ಬಿಪಿಪಿ ಸರ್ಕಾರದಲ್ಲಿ ಸ್ಪಂದಿಸಿತು. ಹೊಸ ತಾಲೂಕಿಗೆ ಭಾಲ್ಕಿ ತಾಲೂಕಿನ 16 ಹಳ್ಳಿಗಳ ಸೇರ್ಪಡೆಗೆ ಬೊಮ್ಮಾಯಿ ಸರ್ಕಾರ ಆದೇಶವು ಮಾಡಿತ್ತು, ಆದರೆ ಇದ್ಯಾವುದು ಈವರೆಗೆ ಅನುಷ್ಠಾವಾಗದೆ ಇರುವುದರಿಂದ ಮತ್ತು ಇತರ ಬೇಡಿಕೆ ಇಟ್ಟುಕೊಂಡು ಹೋರಾಟ ಮಾಡಲಿದ್ದಾರೆ. ರಾಜೋಳೆ ಅವರ ಬೇಡಿಕೆಗಳು ನ್ಯಾಯಯುತವಾಗಿದ್ದು, ಅವರ ಜತೆ ಇರುವೆ ಎಂದು ತಿಳಿಸಿದ್ದಾರೆ.
ಈಗಾಗಲೇ ಹುಲಸೂರು ತಾಲೂಕಿಗೆ ಹಳ್ಳಿಗಳ ಸೇರ್ಪಡೆ ವಿಷಯದಲ್ಲಿ ಮುಖ್ಯಮಂತ್ರಿ, ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಪತ್ರ ಬರೆದು, ಬಜೆಟ್ ನಲ್ಲಿ ಘೋಷಣೆ ಮಾಡಬೇಕೆಂದು ಮನವಿ ಮಾಡಿರುವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.