ಅರ್ಹ ರೈತರಿಗೆ ಕೃಷಿ ಸಾಲ ಕೊಡಿ

mp meeting
Published on

ಬೀದರ್: ಜಿಲ್ಲೆಯ ಎಲ್ಲ ಅರ್ಹ ರೈತರಿಗೆ ಕೃಷಿ ಸಾಲ ನೀಡಬೇಕು ಎಂದು ಲೋಕಸಭೆ ಸದಸ್ಯ ಸಾಗರ್ ಖಂಡ್ರೆ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಆಯೋಜಿಸಿದ ಜಿಲ್ಲೆಯ ಜಿಲ್ಲಾ ಸಮನ್ವಯ ಸಮಿತಿ (ಡಿಸಿಸಿ) ಹಾಗೂ ಜಿಲ್ಲಾ ಮಟ್ಟದ ಪರಾಮರ್ಶಾ ಸಮಿತಿ (ಡಿಎಲ್ಆರ್.ಸಿ) ಸಭೆಯಲ್ಲಿ ಮಾತನಾಡಿ, ಅನ್ನದಾತರಿಗೆ ತೊಂದರೆ ನೀಡಬೇಕು. ಅರ್ಹರಿಗೆ ಸಾಲ ನೀಡುವ ಮೂಲಕ ನೆರವಿಗೆ ಬರಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಶಿಕ್ಷಣ ಸಾಲಗಳ ಕುರಿತು ಆರ್ಬಿಐ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಿದ್ಯಾರ್ಥಿಗಳಿಗೆ ಜಾಮೀನು ಇಲ್ಲದೆ ಶೈಕ್ಷಣಿಕ ಸಾಲ ನೀಡಬೇಕು. ಕೆಲ ಬ್ಯಾಂಕ್ ಗಳು ಬೆಳೆ ಸಾಲದ ಗುರಿ ತಲುಪಲು ವಿಫಲವಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಖಂಡ್ರೆ, ಪಿಎಂಇಜಿಪಿ ಯೋಜನೆಯಡಿ ಉದ್ಯಮ ಸಾಲಗಳ ಅನುಮೋದನೆಯನ್ನು ಗುರಿಯಂತೆ ಪೂರೈಸಲು ಸೂಚಿಸಿದರು.

ಮೇಹಕರ್ನಲ್ಲಿ ಎಸ್ಬಿಐ ಶಾಖೆ ಮತ್ತು ಔರಾದ್ ಪಟ್ಟಣದಲ್ಲಿ ಹೆಚ್ಚುವರಿ ಶಾಖೆ ತೆರೆಯುವ ಸಾಧ್ಯತೆಗಳ ಕುರಿತು ಸಮೀಕ್ಷೆ ನಡೆಸಬೇಕು. ರೈತರು, ವಿದ್ಯಾರ್ಥಿಗಳು ಹಾಗೂ ಯುವ ಉದ್ಯಮಿಗಳಿಗೆ ಅಗತ್ಯವಿರುವ ಹಣಕಾಸು ನೆರವನ್ನು ಸುಗಮವಾಗಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಗಿರೀಶ್ ಬದೋಲೆ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸತೀಶಕುಮಾರ ಗಾಯಕವಾಡ್ ಹಾಗೂ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net