ರಾಜ್ಯಮಟ್ಟದ ಆದರ್ಶ ದಂಪತಿ ಪ್ರಶಸ್ತಿ

Adarsh Dampati Award To vijaylakshmi & parmeshwar Penchkar
Published on

ಬೀದರ್: ಔರಾದ್ ತಾಲ್ಲೂಕಿನ ಗಡಿಕುಶನೂರದ ವಿಜಯಲಕ್ಷ್ಮಿ ಪೆಂಚನಕರ್ ಹಾಗೂ ಉಪನ್ಯಾಸಕ ಪರಮೇಶ್ವರ ಪೆಂಚನಕರ್ ದಂಪತಿಗೆ ಕರ್ನಾಟಕ ಶಿಕ್ಷಕರ ವಿಕಾಸ ಪರಿಷತ್, ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘ ಹಾಗೂ ಪೂಜ್ಯ ಬಾಲಯೋಗಿನಿ ಸುವರ್ಣಾ ಮಾತಾಜಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೊಡಲಾಗುವ ರಾಜ್ಯಮಟ್ಟದ ಆದರ್ಶ ದಂಪತಿ ಪ್ರಶಸ್ತಿ ಲಭಿಸಿದೆ.

ಭಾಲ್ಕಿ ತಾಲ್ಲೂಕಿನ ಧನ್ನೂರ(ಎಸ್) ಗ್ರಾಮದಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಬಾಲಯೋಗಿನಿ ಸುವರ್ಣಾ ಮಾತಾಜಿ ಪ್ರಶಸ್ತಿ ಪ್ರದಾನ ಮಾಡಿದರು.

ಧಾಮಾಜಿ ಮಹಾರಾಜ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರಾಜ ಹಾಸನಕರ್, ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net