ಹೇಮರೆಡ್ಡಿ ಮಲ್ಲಮ್ಮ ಮಂದಿರಕ್ಕೆ ಸೌಮ್ಯ ರೆಡ್ಡಿ ಭೇಟಿ

Soumya Reddy Visit To Hemreddy Mallamma Mandir
Published on

ಬೀದರ್: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಶುಕ್ರವಾರ ಇಲ್ಲಿಯ ಅಮಲಾಪುರ ರಸ್ತೆಯಲ್ಲಿ ಇರುವ ಹೇಮರೆಡ್ಡಿ ಮಲ್ಲಮ್ಮ ಮಂದಿರಕ್ಕೆ ಭೇಟಿ ನೀಡಿದರು.

ಮಂದಿರದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಜಿಲ್ಲಾ ರೆಡ್ಡಿ ಸಮಾಜದ ವತಿಯಿಂದ ಶಾಲು ಹೊದಿಸಿ ಅವರನ್ನು ಸನ್ಮಾನಿಸಲಾಯಿತು.

ಡಾ.ಎಸ್.ಎಸ್. ಸಿದ್ಧಾರೆಡ್ಡಿ ಫೌಂಡೇಷನ್ ಅಧ್ಯಕ್ಷೆ ಡಾ. ಗುರಮ್ಮ ಸಿದ್ಧಾರೆಡ್ಡಿ, ಬಿಡಿಎ ಮಾಜಿ ಅಧ್ಯಕ್ಷ ಮುರಳಿಧರ ಎಕಲಾರಕರ್, ಜಿಲ್ಲಾ ರೆಡ್ಡಿ ಸಮಾಜದ ಅಧ್ಯಕ್ಷ ಶಂಕರ ರೆಡ್ಡಿ ಚಿಟ್ಟಾ, ನಗರಸಭೆ ಮಾಜಿ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಸದಸ್ಯ ರಾಜು ಚಿಂತಾಮಣಿ, ಪ್ರಮುಖರಾದ ಸಂಜು ರೆಡ್ಡಿ ಜಂಪಾ, ರಾಜೇಂದ್ರ ರೆಡ್ಡಿ ಶೇರಿಕಾರ್, ಓಂರೆಡ್ಡಿ ತಿರುಮಲ, ವೆಂಕರೆಡ್ಡಿ ಪೆದ್ದ, ರವಿರೆಡ್ಡಿ ಮರೂರ, ಅಶೋಕ್ ತಡಪಳ್ಳಿ, ಕರುಣಾ, ವಿಜಯಲಕ್ಷ್ಮಿ, ಪ್ರವೀಣ, ಅನಂತಲಕ್ಷ್ಮಿ ಜಂಪಾ, ಸಂಗ್ರಾಮರೆಡ್ಡಿ, ಪೆಂಟಾರೆಡ್ಡಿ, ನರಸಿಂಹರೆಡ್ಡಿ, ವಿಜಯರೆಡ್ಡಿ, ಶ್ರೀಲೇಖಾ ಶ್ರೀನಿವಾಸ್ ರೆಡ್ಡಿ, ಉಮಾದೇವಿ, ಅಶೋಕ ರೆಡ್ಡಿ, ರವಿ ರೆಡ್ಡಿ, ಪೂಜಾ ಜಾರ್ಜ್, ಕರುಣಾ ಶಂಕರ ರೆಡ್ಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net