ಹಂಪಿ ಉತ್ಸವದಲ್ಲಿ ಬೀದರ್ ತಂಡದ ವಚನ ನೃತ್ಯ

Hampi utsav
Published on

ಬೀದರ್: ಹಂಪಿಯಲ್ಲಿ ನಡೆದ 'ಹಂಪಿ ಉತ್ಸವ'ದಲ್ಲಿ ಬೀದರ್‍ನ ಕಲಾವಿದ ಪೂರ್ಣಚಂದ್ರ ಮೈನಾಳೆ ಸಾರಥ್ಯದ ನೃತ್ಯಾಂಗನ ನಾಟ್ಯ ಮತ್ತು ಕಲಾ ಕೇಂದ್ರದ ತಂಡ ಆಕರ್ಷಕ ವಚನ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು.

ಕಲಾವಿದರಾದ ಸುಷ್ಮಾ ಪಾವಡಶೆಟ್ಟಿ, ಬಸವ ಸೌರಭ, ಅನ್ವಿ ಪಾಟೀಲ, ಸ್ವಾತಿ, ಆರಾಧ್ಯ, ಆದ್ಯಾ, ವೈಷ್ಣವಿ, ಶ್ರದ್ಧಾ ಅವರನ್ನು ಒಳಗೊಂಡ ತಂಡದ ವಚನ ನೃತ್ಯವು ಸಭಿಕರನ್ನು ಮಂತ್ರಮುಗ್ಧಗೊಳಿಸಿತು.

ನೃತ್ಯಾಂಗನ ನಾಟ್ಯ ಮತ್ತು ಕಲಾ ಕೇಂದ್ರದ ತಂಡವು ಹಂಪಿ ಉತ್ಸವಕ್ಕೆ ಆಯ್ಕೆಯಾದ ಬೀದರ್ ಜಿಲ್ಲೆಯ ಏಕೈಕ ತಂಡವಾಗಿತ್ತು.

ಪ್ರಖ್ಯಾತ ಹಂಪಿ ಉತ್ಸವದಲ್ಲಿ ಕಲಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಟ್ಟ ವಿಜಯಪುರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಹಾಗೂ ಪ್ರವಾಸೋದ್ಯಮ ಇಲಾಖೆಗೆ ನೃತ್ಯಾಂಗನ ನಾಟ್ಯ ಮತ್ತು ಕಲಾ ಕೇಂದ್ರದ ಅಧ್ಯಕ್ಷ ಪೂರ್ಣಚಂದ್ರ ಮೈನಾಳೆ ಕೃತಜ್ಞತೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net