ಸಂಭ್ರಮದ ಗಣೇಶ್ವರ ಅವಧೂತರ ಪಲ್ಲಕ್ಕಿ ಶೋಭಾಯಾತ್ರೆ

Janseva School - Copy
Published on

ಬೀದರ್: ಭಾಲ್ಕಿ ತಾಲ್ಲೂಕಿನ ಧನ್ನೂರ (ಎಸ್) ಗ್ರಾಮದಲ್ಲಿ ಗಣೇಶ್ವರ ಅವಧೂತರ ಪಲ್ಲಕ್ಕಿ ಶೋಭಾಯಾತ್ರೆ, ಮಹಾ ಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡಿದ್ದ ಸಪ್ತಾಹ ಸಮಾರೋಪ, ರಾಜ್ಯ ಹಾಗೂ ಜಿಲ್ಲಾಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಈಚೆಗೆ ನಡೆಯಿತು.

ಗ್ರಾಮದಲ್ಲಿ ಬಾಲಯೋಗಿನಿ ಸುವರ್ಣ ಮಾತಾಜಿ ಸಮಾಜೋಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಮಾಜಿಕ ಪರಿವರ್ತನೆಗೆ ಶ್ರಮಿಸುತ್ತಿದ್ದಾರೆ. ಗಣೇಶ್ವರ ಅವಧೂತರ ಅನುಯಾಯಿ ಆಗಿರುವ ಅವರು, ಲೋಕ ಕಲ್ಯಾಣಕ್ಕಾಗಿ ಅನುಷ್ಠಾನ ಕೈಗೊಂಡಿದ್ದರು ಎಂದು ಕಾರ್ಯಕ್ರಮ ಉದ್ಘಾಟಿಸಿದ ಧಾಮಾಜಿ ಮಹಾರಾಜ ಬಣ್ಣಿಸಿದರು.

25 ದಂಪತಿಗೆ ರಾಜ್ಯಮಟ್ಟದ ಆದರ್ಶ ದಂಪತಿ, ವಿವಿಧ ಕ್ಷೇತ್ರಗಳ 21 ಮಂದಿ ಸಾಧಕರಿಗೆ ರಾಜ್ಯಮಟ್ಟದ ಉತ್ತಮ ಸೇವಾ ರತ್ನ ಹಾಗೂ 21 ಜನರಿಗೆ ಜಿಲ್ಲಾಮಟ್ಟದ ಉತ್ತಮ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಾಲಯೋಗಿನಿ ಸುವರ್ಣ ಮಾತಾಜಿ ಸಾನಿಧ್ಯ ವಹಿಸಿದ್ದರು. ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವರಾಜ ಹಾಸನಕರ್, ಹುಮನಾಬಾದ್ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಎಸ್. ಗುಡಾಳಸ, ಪ್ರಮುಖರಾದ ಚಂದ್ರಕಾಂತ ಬನ್ನಾಳೆ, ಮನೋಹರ ಹೋಳ್ಕರ್, ಜಗನ್ನಾಥ ಮೂರ್ತಿ, ಸತೀಶ್, ವಿಶ್ವರಾಧ್ಯ, ರಮೇಶ ಹಲಗೆ, ಡಿ. ಝಾಕೀರ್ ಹುಸೇನ್, ಎನ್. ಭಾಸ್ಕರ್ ಕಾಶೆಂಪುರ, ರಾಚಪ್ಪ ಪಾಟೀಲ, ಸಂಜೀವಕುಮಾರ ಸ್ವಾಮಿ, ನಾಗಭೂಷಣ ಮಾಮಡಿ, ಸೂರ್ಯಕಾಂತ ಸುಂಟೆ, ಗೋವಿಂದ ಪೂಜಾರಿ, ಬಾಲಾಜಿ ಕಾಂಬಳೆ, ಭೀಮಣ್ಣ ಕೊಂಕಣೆ, ಕೀರ್ತಿಲತಾ ಹೊಸಾಳೆ, ಸರಿತಾ ಗಾಯಕವಾಡ್, ರಾಣಿ ಸತ್ಯಮೂರ್ತಿ, ಅಶೋಕ ಹೊಸಮನಿ, ಕುಪೇಂದ್ರ ಜಗಶೆಟ್ಟಿ, ಅಂದಾನ ಗೌಡ, ವೈಜಿನಾಥ ಸಾಳೆ,  ಇಂದ್ರಕಾಂತ, ಬಳವಂತರಾವ್ ರಾಠೋಡ್, ಗಿಪ್ಪನ್ ಕೋಟೆ, ತಾತ್ಯಾರಾವ್ ಕಾಂಬಳೆ, ವೀರಭದ್ರಪ್ಪ ಚಟ್ನಾಳೆ, ಸತೀಶ್ ಸಿದ್ಧೇಶ್ವರ, ತುಕಾರಾಮ ಬೆಲ್ದಾರ್, ಪರಮೇಶ್ವರ ಕುರಕುಂಟಾ, ಪಲ್ಹಾದ್, ತಾಜುದ್ದಿನ್ ಮತ್ತಿತರರು ಇದ್ದರು.

ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಹಾಗೂ ಪೂಜ್ಯ ಬಾಲಯೋಗಿನಿ ಸುವರ್ಣ ಮಾತಾಜಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net