ಸಿದ್ಧಾರೂಢ ಮಠದಲ್ಲಿ ಮಹಾ ಶಿವರಾತ್ರಿ 26ರಂದು

Shivkumar Swamiji Photo
Published on

ಬೀದರ್: ನಗರದ ಸಿದ್ಧಾರೂಢ ಮಠದಲ್ಲಿ ಡಾ. ಶಿವಕುಮಾರ ಸ್ವಾಮೀಜಿ ಸಾನಿಧ್ಯದಲ್ಲಿ ಫೆ. 26 ರಂದು ಮಹಾ ಶಿವರಾತ್ರಿ ನಿಮಿತ್ತ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸಂಜೆ 6ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ, ಸಂಜೆ 7ಕ್ಕೆ 12 ಜ್ಯೋತಿರ್ಲಿಂಗಗಳ ಅಭಿಷೇಕ, ರಾತ್ರಿ 9ಕ್ಕೆ ಭಜನೆ ಹಾಗೂ ರಾತ್ರಿ 10ಕ್ಕೆ ಶ್ರೀಗಳ ಪ್ರವಚನ ನಡೆಯಲಿದೆ.

ಮಠದ ಭಕ್ತರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮಠದ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net