ಬಸವ ಮಂಟಪ: 26 ರಂದು ಇಷ್ಟಲಿಂಗ ಪೂಜೆ

Published on

ಬೀದರ್: ಮಹಾ ಶಿವರಾತ್ರಿ ನಿಮಿತ್ತ ರಾಷ್ಟ್ರೀಯ ಬಸವ ದಳ ಹಾಗೂ ಲಿಂಗಾಯತ ಸಮಾಜದ ವತಿಯಿಂದ ನಗರದ ಬಸವ ಮಂಟಪದಲ್ಲಿ ಫೆ. 26 ರಂದು ಸಂಜೆ 4.30ಕ್ಕೆ ಸಾಮೂಹಿಕ ಇಷ್ಟಲಿಂಗ ಪೂಜೆ ಆಯೋಜಿಸಲಾಗಿದೆ.

ಮಾತೆ ವಿಜಯಾಂಬಿಕೆ ಸಾನಿಧ್ಯ, ಸುರೇಶಕುಮಾರ ಸ್ವಾಮಿ ಸಮ್ಮುಖ ವಹಿಸುವರು. ರಾಷ್ಟ್ರೀಯ ಬಸವ ದಳದ

ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಅಧ್ಯಕ್ಷತೆ ಹಾಗೂ ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ್ ಪಾಟೀಲ ಖಾಜಾಪುರ ನೇತೃತ್ವ ವಹಿಸುವರು.

ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ರಾಷ್ಟ್ರೀಯ ಬಸವ ದಳದ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಸಂಜೀವಕುಮಾರ ಪಾಟೀಲ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net