

ಬೀದರ್: ತಾಲ್ಲೂಕಿನ ಮನ್ನಳ್ಳಿ ಪೊಲೀಸ್ ಠಾಣೆಗೆ ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಜಾನಕನೋರ ವೈಯಕ್ತಿಕವಾಗಿ ರೂ. 30 ಸಾವಿರ ವೆಚ್ಚದ ಎರಡು ಸಿಮೆಂಟ್ ಕುರ್ಚಿ ಹಾಗೂ ಸೋಲಾರ್ ದೀಪಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಕುರ್ಚಿ ಹಾಗೂ ಸೋಲಾರ್ ದೀಪಗಳನ್ನು ಠಾಣೆ ಪಿಎಸ್‍ಐ ಅವರಿಗೆ ಈಚೆಗೆ ಹಸ್ತಾಂತರಿಸಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಠಾಣೆಗೆ ಕುರ್ಚಿ ಹಾಗೂ ಸೋಲಾರ್ ದೀಪ ಕೊಡುಗೆಯಾಗಿ ನೀಡಲಾಗಿದೆ. ಸಿಮೆಂಟ್ ಕುರ್ಚಿಗಳ ಮೇಲೆ 'ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ, ಜವಾಬ್ದಾರಿಯುತರಾಗಿರಿ’, ‘ವಾಹನ ಚಾಲನೆ ಮಾಡುವಾಗ ಹೆಲ್ಮೇಟ್ ಧರಿಸಿ, ನಿಮಗಲ್ಲದಿದ್ದರೂ ನಿಮ್ಮವರಿಗಾಗಿ’ ಎಂಬ ಸಂಚಾರ ನಿಯಮಗಳ ಜಾಗೃತಿ ಬರಹಗಳನ್ನು ಬರೆಯಲಾಗಿದೆ. ಸೋಲಾರ್ ದೀಪದಿಂದ ರಾತ್ರಿ ವೇಳೆ ಠಾಣೆಗೆ ಬರುವವರಿಗೆ ಸಹಾಯವಾಗಲಿದೆ ಎಂದು ನರಸಪ್ಪ ಜಾನಕನೋರ ತಿಳಿಸಿದರು.
ಠಾಣೆಗೆ ಸಿಮೆಂಟ್ ಕುರ್ಚಿ ಹಾಗೂ ಸೋಲಾರ್ ದೀಪ ಕೊಡುಗೆಯಾಗಿ ನೀಡಿದ ನರಸಪ್ಪ ಅವರ ಸಾಮಾಜಿಕ ಕಾರ್ಯಕ್ಕೆ ಪಿಎಸ್‍ಐ ನಂದಿನಿ ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಠಾಣೆಯ ಸಿಬ್ಬಂದಿ ಇದ್ದರು.