ಬೊಮ್ಮಗೊಂಡೇಶ್ವರ ಉತ್ಸವಕ್ಕೆ ದಿನಾಂಕ ನಿಗದಿ

Santosh Joldapke
Published on

ಬೀದರ್: ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘವು ನಗರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಮಹಾತ್ಮ ಬೊಮ್ಮಗೊಂಡೇಶ್ವರ ಉತ್ಸವಕ್ಕೆ ದಿನಾಂಕ ನಿಗದಿಪಡಿಸಿದೆ.

ಇಲ್ಲಿಯ ಗಾಂಧಿಗಂಜ್‍ನ ಕನಕ ಭವನದಲ್ಲಿ ನಡೆದ ಸಭೆಯಲ್ಲಿ ಮಾರ್ಚ್ 23 ರಂದು ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಉತ್ಸವ ಆಯೋಜಿಸಲು ನಿರ್ಣಯಿಸಲಾಗಿದೆ ಎಂದು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷಕುಮಾರ ಜೊಳದಾಪಕೆ ತಿಳಿಸಿದರು.

ಎಲ್ಲರ ಸಹಕಾರದೊಂದಿಗೆ ಉತ್ಸವವನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಯೋಜಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಪ್ರಮುಖರಾದ ಭೀಮಸಿಂಗ್ ಮಲ್ಕಾಪುರ, ಕಲ್ಲಪ್ಪ ಸಾತೋಳಿ, ಜಟಿಂಗ್ ಮಾಳಗೆ, ಅಮೀತ್ ಸೋಲಪುರ, ಲಕ್ಷಣ ಮೇತ್ರೆ, ಸಂಜುಕುಮಾರ ಡೊಳ್ಳಿ, ಕಲ್ಲಪ್ಪ ಹಾಸಗೊಂಡ ಯರನಳ್ಳಿ, ಕಲ್ಲಪ್ಪ ಬೆನಕನಳ್ಳಿ, ಅಶೋಕ ನ್ಯಾಮತಾಬಾದ್, ಲಕ್ಷ್ಮಣ ಘೋಘಾಡೆ, ಮಲ್ಲಿಕಾರ್ಜುನ ತಾಳಮಡಗಿ, ನಾಗೇಶ ಚಿಟ್ಟಾ, ಬಸವರಾಜ ಕುತ್ತಾಬಾದ್, ವೈಜಿನಾಥ ವಡ್ಡೆ, ಬಸವರಾಜ ಬಾವಗೆ, ರಮೇಶ ಮೇತ್ರೆ, ಎಂ.ಪಿ. ವೈಜಿನಾಥ, ವಿಜಯಕುಮಾರ ಬ್ಯಾಲಹಳ್ಳಿ, ಶ್ರೀಕಾಂತ ಗೋರನಳ್ಳಿ, ರಮೇಶ ಜನವಾಡ, ರಾಜಕುಮಾರ ಅಲಿಯಂಬರ್, ಜಾಲೆಂದರ್ ಕಮಠಾಣ, ಶರಣಪ್ಪ ಜಮಗೆ, ಸುನೀಲ್ ಚಿಲ್ಲರ್ಗಿ, ಸಿದ್ದು ಬಾವಗಿ, ಪ್ರಜ್ವಲ್ ಮೇತ್ರೆ, ಅಜಯ್ ಮಲ್ಕಾಪುರ, ಆನಂದ ಸೋಲಪುರ, ಗದಗೆಪ್ಪ ಚಿಂಚೋಳಿ, ಮಲ್ಲಿಕಾರ್ಜುನ ಜಮಗಿ, ಗೋವಿಂದ ದುರ್ಗೆ, ಸುರೇಶ ಹೂಗೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net