ಚಿತ್ರಕಲಾ ಸ್ಪರ್ಧೆ: ವಿದ್ಯಾರ್ಥಿಗಳ ಉತ್ಸಾಹ

Dist Bal Bhavan Painting Compitation
Published on

ಬೀದರ್: ಇಲ್ಲಿಯ ಜಿಲ್ಲಾ ಬಾಲ ಭವನದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ 1 ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.

82 ವಿದ್ಯಾರ್ಥಿಗಳು ವಿಭಿನ್ನ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು. 1 ರಿಂದ 5 ನೇ ತರಗತಿ ವಿಭಾಗದಲ್ಲಿ ಸ್ಪೂರ್ತಿ ಶಿವಕುಮಾರ (ಪ್ರಥಮ), ಸಮರ್ಥ ಅಂಗದರಾವ್ (ದ್ವಿತೀಯ), ಸಾಮಿಯಾ ಸಯೀದ್ ಇಮ್ರಾನ್ ಸಯೀದ್, ತುಕ್ಕಮ್ಮ ಖಂಡಪ್ಪ (ತೃತೀಯ) ಸ್ಥಾನ ಗಳಿಸಿದರು.

6 ರಿಂದ 8ನೇ ತರಗತಿ ವಿಭಾಗದಲ್ಲಿ ಶ್ರೀಮಯಿ ಶ್ರೀಕಾಂತ (ಪ್ರಥಮ), ಶ್ರದ್ಧಾ ಸಂತೋಷ್ (ದ್ವಿತೀಯ), ಭುವನೇಶ್ವರಿ ಖಂಡೆಪ್ಪ, ಸಂಕೀರ್ತನಾ ಸಂತೋಷ್ (ತೃತೀಯ), 9 ರಿಂದ 10ನೇ ತರಗತಿ ವಿಭಾಗದಲ್ಲಿ ಸಾಕ್ಷಿ ಮಹಾರುದ್ರಪ್ಪ (ಪ್ರಥಮ), ರಿಕ್ಕಿ ವಿಜಯಕುಮಾರ (ದ್ವಿತೀಯ) ಹಾಗೂ ಭಗವಾನ ಪ್ರಸಾದ್ ಬಂಡೆಪ್ಪ (ತೃತೀಯ) ಸ್ಥಾನ ಪಡೆದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ದೊಡ್ಡಿ ಸ್ಪರ್ಧೆಯನ್ನು ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಉಪ ನಿರ್ದೇಶಕಿ ರೂಪಾ ಎಸ್.ಕೆ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಾಲ ಭವನದ ಸಂಯೋಜಕ ಸೂರ್ಯಕಾಂತ ಮೋರೆ, ಕರ್ನಾಟಕ ಸ್ಪೋಟ್ರ್ಸ್ ವಿಂಗ್ ಅಧ್ಯಕ್ಷ ಪರ್ವೇಜ್ ಖಾನ್, ನೂರ್ ಕಾಲೇಜು ಪ್ರಾಚಾರ್ಯ ಡಾ. ಮಹಮ್ಮದ್ ಇಮ್ರಾನ್ ಸಯೀದ್, ನಮ್ಮ ಕರ್ನಾಟಕ ಸೇನೆ ನಗರ ಘಟಕದ ಅಧ್ಯಕ್ಷ ಸಂತೋಷ್ ಪಾಟೀಲ, ಜಿಲ್ಲಾ ಸ್ಪೋಟ್ರ್ಸ್ ವಿಂಗ್ ಅಧ್ಯಕ್ಷ ಯಾಸೀರ್ ಖಾನ್, ಸಹ ಶಿಕ್ಷಕ ಜಗದೀಶ್, ಚಿತ್ರಕಲಾ ಶಿಕ್ಷಕ ಶರಣಪ್ಪ, ವೈಜಿನಾಥ, ಸುವಿತ್ ಮೋರೆ ಇದ್ದರು.

ರಾಜ್ಯ ಬಾಲ ಭವನ ಸೊಸೈಟಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲ ಭವನ ಸಮಿತಿ ವತಿಯಿಂದ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net