

ಬೀದರ್: ನಟ ಪುನೀತ್ ರಾಜಕುಮಾರ ಸ್ಮರಣಾರ್ಥ ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ರಂಗೋಲಿ ಸ್ಪರ್ಧೆಯಲ್ಲಿ ವಂದನಾ ಪ್ರಥಮ ಸ್ಥಾನ ಗಳಿಸಿದರು.
ಸುಹಾಸಿನಿ ದ್ವಿತೀಯ ಮತ್ತು ರಾಧಿಕಾ ತೃತೀಯ ಸ್ಥಾನ ಗಳಿಸಿದರು.
ಸ್ಪರ್ಧೆಯ ಆಯೋಜಕ, ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಜಾನಕನೋರ ಅವರು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಕ್ರಮವಾಗಿ ರೂ. 1,500, ರೂ. 1,000 ಹಾಗೂ ರೂ. 500 ನಗದು ಬಹುಮಾನ, ಪುನೀತ್ ರಾಜಕುಮಾರ ಭಾವಚಿತ್ರದ ಗೋಡೆ ಗಡಿಯಾರ ಹಾಗೂ ಪ್ರಮಾಣ ಪತ್ರ ವಿತರಿಸಿದರು.
ಪ್ರಾಚಾರ್ಯ ತುಕಾರಾಮ ಯಾತಪ್ಪ, ಪ್ರಮುಖರಾದ ರಾಹುಲ್ ಮಿಶ್ರಾ, ಉಮೇಶ ಸಾತೋಳಿ, ವಿಜಯಲಕ್ಷ್ಮಿ ರಾಘವೇಂದ್ರ, ರಾಕೇಶ ಭಂಗೂರೆ ಉಪಸ್ಥಿತರಿದ್ದರು.