ಬೀದರ್-ಜಿಡಗಾ ಹೊಸ ಬಸ್ ಸಂಚಾರಕ್ಕೆ ಚಾಲನೆ

Bidar- Jidga New Bus Start
Published on

ಬೀದರ್: ಬೀದರ್-ಜಿಡಗಾ ಮಧ್ಯೆ ಹೊಸ ಬಸ್ ಸಂಚಾರ ಆರಂಭಗೊಂಡಿತು.

ಔರಾದ್ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಸದಸ್ಯ ರಾಜಕುಮಾರ ಬಿ. ಕಂದಗೂಳೆ ಬಸ್‍ಗೆ ಚಾಲನೆ ನೀಡಿದರು.

ಬಸ್ ನಿತ್ಯ ಮಧ್ಯಾಹ್ನ 3.15ಕ್ಕೆ ಬೀದರ್‍ನಿಂದ ಹೊರಡಲಿದೆ. ಕಲಬುರಗಿ, ಆಳಂದ ಮಾರ್ಗವಾಗಿ ಜಿಡಗಾಕ್ಕೆ ತಲುಪಲಿದೆ. ಹೊಸ ಬಸ್‍ನಿಂದ ಜಿಡಗಾಕ್ಕೆ ತೆರಳುವ ಭಕ್ತರು ಹಾಗೂ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ವಿಭಾಗೀಯ ಸಂಚಾರ ಅಧಿಕಾರಿ ಐ.ಎಂ. ಬಿರಾದಾರ, ಘಟಕ 1 ರ ವ್ಯವಸ್ಥಾಪಕ ವಿ.ಎ. ಭೋವಿ, ಕಾರ್ಮಿಕ ಅಧಿಕಾರಿ ರಾಜಶೇಖರ ತಳಘಟಕರ್, ನಥಾನಿಯಲ್, ವಿಜಯಪ್ರಕಾಶ್ ಸಿಂಧೆ, ಚಾಲಕ ಸಂತೋಷ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net