

ಬೀದರ್: ಕಪಲಾಪುರ (ಎ) ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸತೀಶ್ ಸಿಕೆನಪುರೆ ಹಾಗೂ ಉಪಾಧ್ಯಕ್ಷರಾಗಿ ಶಿವಕುಮಾರ ಕೊಳಾರೆ ಆಯ್ಕೆಯಾಗಿದ್ದಾರೆ.
ಬುಧವಾರ ಗ್ರಾಪಂ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಗಳಾದ ತಾಪಂ ಇಒ ಕಿರಣ ಪಾಟೀಲ್ ಘೋಷಿಸಿದರು. ಯುವ ಮುಖಂಡ ಮಹೇಶ ಮೈಲಾರೆ ನೇತೃತ್ವದಲ್ಲಿ ಆಯ್ಕೆ ನಡೆಯಿತು.
ಗ್ರಾಪಂ ಸದಸ್ಯರಾದ ಶಿವಕುಮಾರ ಬೀರ್ಗೆ, ಕಾಶಿನಾಥ ಕೊಳಾರೆ, ಬಾಬು ಜಾಧವ್, ಈಶ್ವರಮ್ಮ ಹಣಮಂತರಾವ ಮೈಲಾರೆ, ಲಕ್ಷ್ಮೀಬಾಯಿ ಗೌತಮ, ಮೀನಾಕುಮಾರಿ ರಾಮಣ್ಣ, ಶಿಲ್ಪಾ ವಿನೋದ, ತಂಗಮ್ಮ ಅಮೃತ, ಅರ್ಚನಾ ಗೋವಿಂದ, ಶೋಭಾವತಿ ರವೀಂದ್ರರಡ್ಡಿ, ಸಲ್ಮಾಬಿ ರುಕ್ಮೊದ್ದೀನ್, ಪ್ರಮುಖರಾದ ಮಹೇಶ ಮೈಲಾರೆ, ಗಣೇಶ ಬಿರಾದಾರ್, ಅಮರ ಚಾಂಬಳೆ, ಇಮ್ರಾನ್ಖಾನ್, ಅಜಯ ಮೈತ್ರೆ, ಮನೋಜಕುಮಾರ, ಶಿವಕುಮಾರ ಮಾಶೆಟ್ಟೆ, ಆನಂದ ಅಂಬುಲಗೆ, ಶಾಲಿವನ್ ಕೊಳಾರೆ, ಹಣಮಂತರಾವ ಮೈಲಾರೆ, ಅಮೃತ ಮುಲೆಗೆ, ವೀರಶೆಟ್ಟಿ ವಾಗ್ದಾಳೆ ಇತರರಿದ್ದರು.