ಸಂಗೀತ ರಸಮಂಜರಿ 7ರಂದು

Lata
Published on

ಬೀದರ್: ಖ್ಯಾತ ಗಾಯಕಿ, ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ತೃತೀಯ ಪುಣ್ಯಸ್ಮರಣೆ ನಿಮಿತ್ತ ಸಂಗೀತ ಕಲಾ ಮಂಡಳ ವತಿಯಿಂದ "ಏಕ್ ಶ್ಯಾಮ್ ಲತಾ ಕೆ ನಾಮ್" ಸಂಗೀತ ರಸಮಂಜರಿ ಫೆ.7ರಂದು(ಶುಕ್ರವಾರ) ಸಂಜೆ 5ಕ್ಕೆ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.

ಗಾಯಕರಾದ ಅಂಜಲಿ ಕಮಲಾಪುರೆ, ರಶ್ಮಿ ಶರ್ಮಾ, ಆರ್.ಅ‌ಂಜಲಿ, ಆಬೀದ್ ಅಲಿ ಖಾನ್, ಡಾ.ವಿ.ವಿ‌.ನಾಗರಾಜ್, ಶಬ್ಬೀರ್ ಖಾನ್ ಇತರರು ಗಾನಸುಧೆ ಹರಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂಗೀತ ಕಲಾ ಮಂಡಳ ಅಧ್ಯಕ್ಷರಾದ ಹಿರಿಯ ಕಲಾವಿದ ರಾಜೇಂದ್ರಸಿಂಗ್ ಪವಾರ್ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net