ಪತಂಜಲಿ ಶಾಲೆಯಲ್ಲಿ ಹಳದಿ ದಿನಾಚರಣೆ

Yellow Day Celebration- Patanjali School 1
Published on

ಬೀದರ್: ನಗರದ ಕೆಇಬಿ ಕಾಲೊನಿಯ ಶ್ರೀ ಗಣೇಶ್ವರ ಚಾರಿಟಬಲ್ ಟ್ರಸ್ಟ್ ಸಂಚಾಲಿತ ಪತಂಜಲಿ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಹಳದಿ ದಿನ ಆಚರಿಸಲಾಯಿತು.

ಹಳದಿ ಬಣ್ಣದ ಬಟ್ಟೆ ಧರಿಸಿ ಬಂದಿದ್ದ ವಿದ್ಯಾರ್ಥಿಗಳು, ತಮ್ಮೊಂದಿಗೆ ಹಳದಿ ಬಣ್ಣದ ವಸ್ತುಗಳು ಹಾಗೂ ಹಣ್ಣುಗಳನ್ನು ತಂದಿದ್ದರು.

ಬಾಳೆ ಹಣ್ಣು, ನಿಂಬೆ ಹಣ್ಣು, ಅನಾನಸ್, ಕಸ್ಟರ್ಡ್, ರೇಸಿಂಗ್ ಕಾರು, ಟೆಡ್ಡಿ ಬೇರ್, ಗೊಂಬೆ, ಚೆಂಡು, ಬಲೂನ್, ಹಾರುವ ಡಿಸ್ಕ್, ಹೂವು, ಟಿಫಿನ್ ಬಾಕ್ಸ್ ಮೊದಲಾದವು ಹಳದಿ ಬಣ್ಣದ್ದೇ ಆಗಿದ್ದವು.

ವಿದ್ಯಾರ್ಥಿಗಳು ಹಳದಿ ಬಣ್ಣದ ಕಿರೀಟ, ಸೂರ್ಯನ ಆಕೃತಿಯ ಮುಖವಾಡ ಧರಿಸಿ ಸಂಭ್ರಮಿಸಿದರು. ಶಾಲೆಯ ಶಿಕ್ಷಕರು ಸಹ ಹಳದಿ ಬಣ್ಣದ ವಸ್ತ್ರವನ್ನೇ ಧರಿಸಿದ್ದರು.

ಹಳದಿ ಪ್ರಕಾಶಮಾನವಾದ, ಹರ್ಷ ಚಿತ್ತದಿಂದ ಕೂಡಿದ ಬಣ್ಣವಾಗಿದೆ. ಸಂತೋಷದ ಭಾವನೆ ಮೂಡಿಸುತ್ತದೆ ಎಂದು ಟ್ರಸ್ಟ್ ಅಧ್ಯಕ್ಷೆ ಉಷಾ ಮಾರುತಿ ಮೇತ್ರೆ ತಿಳಿಸಿದರು.

ಶಾಲೆಯ ಆಡಳಿತಾಧಿಕಾರಿ ಬಸವರಾಜ ಜಿ. ಮುಗಟಾಪುರೆ, ಮುಖ್ಯಶಿಕ್ಷಕಿ ಸುಪ್ರಿಯಾ ಕುಲಕರ್ಣಿ, ಶಿಕ್ಷಕಿಯರಾದ ಶಾರದಾ ಜ್ಯಾಂತಿಕರ್, ಅನಿತಾ ಕಾಂಬಳೆ, ವನಿತಾ ಕುಲಕರ್ಣಿ, ಶಿವಮಂಗಲಾ ಪಾಟೀಲ, ಪೂಜಾ ಕೋಳಿ, ಪವಿತ್ರಾ ಸ್ವಾಮಿ, ಶ್ರುತಿ ತಲಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net