ಶಿವಕುಮಾರಗೆ ರೂ.1 ಲಕ್ಷ ನೆರವು

shivkumar
Published on

ಬೀದರ್: ನಗರದಲ್ಲಿ ಇತ್ತೀಚೆಗೆ ಹಣ ದರೋಡೆ ಹಾಗೂ ಶೂಟೌಟ್ ಪ್ರಕರಣದಲ್ಲಿ ಗಾಯಗೊಂಡ ಶಿವಕುಮಾರಗೆ ಜಿಲ್ಲಾ ಬಿಜೆಪಿಯಿಂದ ಒಂದು ಲಕ್ಷ ರೂ. ನೆರವು ನೀಡಲಾಗಿದೆ.

ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹಾಗೂ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ನೇತೃತ್ವದಲ್ಲಿ ಮುಖಂಡರು ಶಿವಕುಮಾರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದರು. ಸರ್ಕಾರದಿಂದ ಈವರೆಗೆ ನಯಾಪೈಸೆ ಪರಿಹಾರ ನೀಡಿಲ್ಲ. ಕರ್ತವ್ಯ ನಿರ್ವಹಿಸುವ ಸಿಎಂಎಸ್ ಕಂಪನಿಯಿಂದ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲಾಗಿದೆ ಎಂದು ಸಂತ್ರಸ್ತ ಕುಟುಂಬದವರು ಅಳಲು ತೋಡಿಕೊಂಡರು. ಘಟನೆಯಲ್ಲಿ ಮೃತ ಹಾಗೂ ಗಾಯಗೊಂಡ ಕುಟುಂಬಕ್ಕೆ ಸರ್ಕಾರ ಶೀಘ್ರ ಪರಿಹಾರ ಹಾಗೂ ಸರ್ಕಾರಿ ನೌಕರಿ ನೀಡಬೇಕು. ನಿರ್ಲಕ್ಷ್ಯ ಮಾಡಿದರೆ ಹೋರಾಟ ಮಾಡಲಾಗುವುದು ಎಂದು ಬೆಲ್ದಾಳೆ ಎಚ್ಚರಿಸಿದರು.

ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ನಗರಸಭೆ ಸದಸ್ಯ ಶಶಿ ಹೊಸಳ್ಳಿ, ಪ್ರಮುಖರಾದ ರಾಜಶೇಖರ ನಾಗಮೂರ್ತಿ, ರಾಜಕುಮಾರ ಪಾಟೀಲ್, ವೀರು ದಿಗ್ವಾಲ್, ವೀರೇಶ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net