ಪಾಶ್ರ್ವನಾಥ ಭಗವಾನರ ಅಂಚೆ ಚೀಟಿ ಲೋಕಾರ್ಪಣೆ

Kamthan - Copy
Published on

ಬೀದರ್: ತಾಲ್ಲೂಕಿನ ಕಮಠಾಣ ಗ್ರಾಮದ ಪಾಶ್ರ್ವನಾಥ ದಿಗಂಬರ ಜೈನ ಮಂದಿರದಲ್ಲಿ ಮಂಗಳವಾರ ನಡೆದ ವಾರ್ಷಿಕ ರಥ ಯಾತ್ರಾ ಮಹೋತ್ಸವದಲ್ಲಿ ಭಾರತೀಯ ಅಂಚೆ ಇಲಾಖೆಯಿಂದ ಹೊರ ತರಲಾದ ಪಾಶ್ರ್ವನಾಥ ಭಗವಾನರ ಭಾವಚಿತ್ರದ ಅಂಚೆ ಚೀಟಿಯನ್ನು ಲೋಕಾರ್ಪಣೆ ಮಾಡಲಾಯಿತು.

ಮಹಾ ಪುರುಷರ ಆದರ್ಶ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದು ಅಂಚೆ ಚೀಟಿ ಲೋಕಾರ್ಪಣೆ ಮಾಡಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.

ಅಂಚೆ ಇಲಾಖೆಯು ಪಾಶ್ರ್ವನಾಥ ಭಗವಾನರ ಶಾಶ್ವತ ಅಂಚೆ ಮುದ್ರೆ ಸಹ ಮಾಡಿದ್ದು, ಮಹಾವೀರ ಜಯಂತಿಗೆ ಲೋಕಾರ್ಪಣೆ ಮಾಡಲಾಗುವುದು ಎಂದು ಪ್ರಧಾನ ಅಂಚೆ ಅಧೀಕ್ಷಕ ವಿ.ಎಲ್. ಚಿತಕೋಟ ತಿಳಿಸಿದರು.

ಇಲಾಖೆಗೆ ಪಾಶ್ರ್ವನಾಥ ಭಗವಾನರ ಭಾವಚಿತ್ರ ಸಹಿತ ಅಂಚೆ ಚೀಟಿ ಹೊರ ತರುವ ಅವಕಾಶ ದೊರೆತದ್ದು ಸಂತಸ ಉಂಟು ಮಾಡಿದೆ ಎಂದು ಅಂಚೆ ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್ ನುಡಿದರು.

ಜೈನ ಸಮುದಾಯದ ಮುಖಂಡ ವಿಜಯಕುಮಾರ ಜೈನ್, ಮಂದಿರ ಟ್ರಸ್ಟ್ ಅಧ್ಯಕ್ಷ ಮಹಾವೀರ ಜೈನ, ಕಾರ್ಯದರ್ಶಿ ಪಾಶ್ರ್ವನಾಥ ಜೈನ, ಕರ್ನಾಟಕ ಜೈನ ಅಸೋಸಿಯೇಷನ್ ಆಡಳಿತ ಮಂಡಳಿ ಸದಸ್ಯ ದಿಲೀಪ ಕವಡೆ, ಟ್ರಸ್ಟ್ ಸದಸ್ಯರು ಹಾಗೂ ಭಕ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net