

ಬೀದರ್: ಚಿಟಗುಪ್ಪ ತಾಲ್ಲೂಕುಮಟ್ಟದ ಕ್ರೀಡಾಕೂಟದಲ್ಲಿ ಸಾಲಿನಾ ಜಾನ್ಸ್ ಮಿಂಚಿನ ಓಟಗಾರ್ತಿಯಾಗಿ ಹೊರ ಹೊಮ್ಮಿದರು.
ಯುವತಿಯರ ವಿಭಾಗದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಅವರು ಮೊದಲ ಸ್ಥಾನ ಗಳಿಸಿದರು. ಚೇತನಾ ಶಂಕರ (ದ್ವಿತೀಯ) ಹಾಗೂ ಫಲಕನಾಜ್ ಮಸ್ತಾನ್ ಅಲಿ (ತೃತೀಯ) ಸ್ಥಾನ ಪಡೆದರು.
ಸ್ಲೋ ಸೈಕ್ಲಿಂಗ್‍ನಲ್ಲಿ ಚೇತನಾ ಶಂಕರ (ಪ್ರಥಮ) ಹಾಗೂ ಆಯೇಶಾ ಸೈನೊದ್ದಿನ್ (ದ್ವಿತೀಯ) ಸ್ಥಾನ ಗಳಿಸಿದರು. ಕೊಕ್ಕೋ ಸ್ಪರ್ಧೆಯಲ್ಲಿ ಕ್ವೀನ್ ಜ್ಞಾನ ದರ್ಶನ ಕೊಕ್ಕೋ ತಂಡ ಮೊದಲ ಸ್ಥಾನ ಪಡೆದರೆ, ಶ್ರೀ ಪಂಚಾಕ್ಷರಿ ಯುವತಿಯರ ಕೊಕ್ಕೋ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಯುವಕರ ವಿಭಾಗದ ವೇಟ್ ಲಿಫ್ಟಿಂಗ್‍ನಲ್ಲಿ ಸಾದುಕ್ ಕಾಜಂ (ಪ್ರಥಮ), ಸೈಯದ್ ಫೈಜನ್ ಅಹಮ್ಮದ್ (ದ್ವಿತೀಯ), ಮಹಮ್ಮದ್ ಮಾಜೀದ್ ಪಾಶಾ (ತೃತೀಯ), ಬ್ಯಾಡ್ಮಿಂಟನ್‍ನಲ್ಲಿ ವಿಕಾಸ ರೆಡ್ಡಿ (ಪ್ರಥಮ), ಆದಿತ್ಯ ಗುಂಡಪ್ಪ (ದ್ವಿತೀಯ) ಮತ್ತು ಅರುಣಕುಮಾರ ಕುಪೇಂದ್ರ (ತೃತೀಯ) ಸ್ಥಾನ ಗಳಿಸಿದರು. ವಾಲಿಬಾಲ್‍ನಲ್ಲಿ ಸುಭಾಷ್‍ಚಂದ್ರ ಬೋಸ್ ವಾಲಿಬಾಲ್ ತಂಡ (ಪ್ರಥಮ) ಸಿ.ಎಸ್.ಕೆ. ಸದ್ಭೋದಿನಿ ತಂಡ (ದ್ವಿತೀಯ) ಸ್ಥಾನ ಪಡೆಯಿತು.
ಚಿಟಗುಪ್ಪದ ಶ್ರೀ ಪಂಚಾಕ್ಷರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ರಾಜ್ಯ ಸಂಪನ್ಮೂಲ ವ್ಯಕ್ತಿ ಡಾ. ಆರ್.ಕೆ. ಚಾರಿ ಉದ್ಘಾಟಿಸಿದರು. ಶೀ ದಿಲೀಪಕುಮಾರ ಭಯ್ಯಾ ಸ್ಮಾರಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರ ಭಯ್ಯಾ ಅಧ್ಯಕ್ಷತೆ ವಹಿಸಿದ್ದರು.
ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರಕುಮಾರ ಗೋರಮೆ, ಕಾರ್ಯಕ್ರಮದ ಸಂಯೋಜಕ ಲಕ್ಷ್ಮಣ ಪಿ. ಮಚಕುರೆ, ಕನ್ನಡ ಸಾಹಿತ್ಯ ಪರಿಷತ್ತಿನ ಚಿಟಗುಪ್ಪ ತಾಲ್ಲೂಕು ಘಟಕದ ಅಧ್ಯಕ್ಷ ರಮೇಶ ಸಲಗರ್, ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಅಧ್ಯಕ್ಷ ಅನಿಲಕುಮಾರ ಸಿಂಧೆ, ಸದ್ಭೋದಿನಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯೆ ಸಂಗೀತಾ ಪಾಟೀಲ, ಪ್ರಾಧ್ಯಾಪಕ ಶಾಂತಕುಮಾರ ಉಪಸ್ಥಿತರಿದ್ದರು.
ಸಾರಿಕಾ ಮಚಕುರೆ ನಿರೂಪಿಸಿದರು.
ನೆಹರೂ ಯುವ ಕೇಂದ್ರ, ಮಾಡಗೂಳದ ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಚಿಟಗುಪ್ಪದ ಶ್ರೀ ದಿಲೀಪಕುಮಾರ ಭಯ್ಯಾ ಸ್ಮಾರಕ ಶಿಕ್ಷಣ ಸಂಸ್ಥೆ ವತಿಯಿಂದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.