ಶಾಸಕ ಚವ್ಹಾಣ್ ಗ್ರಾಮ ವಾಸ್ತವ್ಯ

prabhu chouhan
Published on

ಔರಾದ್: ಶಾಸಕ ಪ್ರಭು ಚವ್ಹಾಣ್ ಅವರು ಗುರುವಾರ ತಾಲೂಕಿನ ವಡಗಾಂವ(ಡಿ)ನಲ್ಲಿ ಗ್ರಾಮ ವಾಸ್ತವ್ಯ ಕೈಗೊಳ್ಳಲಿದ್ದಾರೆ.

ಬೆಳಗ್ಗೆ 8.30ಕ್ಕೆ ಗ್ರಾಮದಿಂದ ಹೊರಟು, 9.30ಕ್ಕೆ ಬಳತ್(ಕೆ), 10.20ಕ್ಕೆ ಹಾಲಳ್ಳಿ, 11ಕ್ಕೆ ಮಸ್ಕಲ್, 11.45ಕ್ಕೆ ನಾಗೂರ(ಬಿ), 12.30ಕ್ಕೆ ಸಂತಪುರ, 1.45ಕ್ಕೆ ಕಪ್ಪಿಕೇರಿ, 2.30ಕ್ಕೆ ಜೊನ್ನಿಕೇರಿ, 3.15ಕ್ಕೆ ಜೋಜನಾದಲ್ಲಿ ಸಂಚರಿಸಿದ ನಂತರ ವಡಗಾಂವ(ಡಿ)ಗೆ ಆಗಮಿಸಿ ಗ್ರಾಮ ಸಂಚಾರ ನಡೆಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಸಾರ್ವಜನಿಕರೊಂದಿಗೆ ಸಭೆ, ಅಹವಾಲುಗಳನ್ನು ಸ್ವೀಕರಿಸುವರು.

ಬಳಿಕ ಗ್ರಾಮದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ವಿದ್ಯಾಥರ್ಿಗಳ ಸಮಸ್ಯೆ ಆಲಿಸಿ, ಅಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ. ಪ್ರತಿ ವರ್ಷದಂತೆ ಪ್ರಸಕ್ತವೂ ಜ.2ರಿಂದ ಗ್ರಾಮ ಸಂಚಾರ ಆರಂಭಿಸಿದ್ದು, ಅಧಿಕಾರಿಗಳ ತಂಡದೊಂದಿಗೆ ಚಿಂತಾಕಿ, ಕಮಲನಗರ, ಠಾಣಾ ಕುಶನೂರ, ಏಕಂಬಾ, ಸಂತಪುರ, ದಾಬಕಾ, ವಡಗಾಂವ(ಡಿ) ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ. ಕೊನೆಯ ದಿನ ಬಾಕಿ ಉಳಿದ ಕೆಲವು ಗ್ರಾಮಗಳಲ್ಲಿ ಸಂಚರಿಸಲಿದ್ದಾರೆ.

ಹಳ್ಳಿ ಜನತೆ ಎದುರಿಸುತ್ತಿರುವ ಸಮಸ್ಯೆಗಳು, ಆಗಬೇಕಾದ ಕೆಲಸಗಳ ಬೇಡಿಕೆಗಳನ್ನು ತಿಳಿಯಬೇಕು. ಜನರ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸಬೇಕೆಂಬ ಸದುದ್ದೇಶದಿಂದ 2009ರಿಂದ ಪ್ರತಿ ವರ್ಷ ಗ್ರಾಮ ಸಂಚಾರ ನಡೆಸುತ್ತಿದ್ದೇನೆ. ಸಂಚಾರದ ಕೊನೆಯ ದಿನವಾದ ಗುರುವಾರ ವಡಗಾಂವ(ಡಿ)ನಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಜತೆಗೆ ಗ್ರಾಮ ವಾಸ್ತವ್ಯ ಕೈಗೊಂಡು ಜನರ ಸಮಸ್ಯೆಗಳನ್ನು ಆಲಿಸಲಿದ್ದೇನೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಶಾಸಕ ಚವ್ಹಾಣ್ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net