

ಬೀದರ್: ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಕಾಮಗಾರಿಗಳ ಬಗ್ಗೆ ಬೇಡಿಕೆ ಇದ್ದು, ಅವುಗಳನ್ನು ಹಂತ ಹಂತವಾಗಿ ಈಡೇರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಚಟ್ನಳ್ಳಿಯಲ್ಲಿ ಸೋಮವಾರ ಗ್ರಾಮದ ಮುಖ್ಯರಸ್ತೆಯಿಂದ ಸಿಂದೋಲವರಗೆ 2.38 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಮಗಾರಿ ಗುಣಮಟ್ಟದೊಂದಿಗೆ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ನಿರ್ಲಕ್ಷ್ಯ ಮಾಡಿದರೆ ಸಂಬಂತ ಗುತ್ತಿಗೆದಾರ, ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗುಣಮಟ್ಟದ ರಸ್ತೆ ಸೌಲಭ್ಯ ಒದಗಿಸುವುದು ಮೊದಲ ಕರ್ತವ್ಯ. ಹಳ್ಳಿಗಳಲ್ಲಿ ಸಹ ಗುಣಮಟ್ಟದ ರಸ್ತೆ ಇದ್ದರೆ ಮಾತ್ರ ಕ್ಷೇತ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ತಿಳಿಸಿದರು.
ಮುಖಂಡರಾದ ಶಂಕ್ರೆಪ್ಪ ಬಿರಾದಾರ್, ಘಾಳೆಪ್ಪ ಚಟ್ನಳ್ಳಿ, ಭೋಜಪ್ಪ ಸಿರ್ಸಿ, ಅನೀಲ ಬಿರಾದಾರ್, ಶಿವರಾಜ ಗಡಿಮನಿ, ಗುಂಡಪ್ಪ ಬುಧೇರಾ, ರಾಜರಡ್ಡಿ, ನಾಗೇಶ ಮೈಲಾರೆ, ಸಂತೋಷ ಟೇಲರ್, ನಯಿಮ್, ವೀರಶೆಟ್ಟಿ ಪಾಟೀಲ್, ಗುರಯ್ಯ ಸ್ವಾಮಿ, ಸೂರ್ಯಕಾಂತ, ಪ್ರವೀಣ ತರಿ, ಬಸವರಾಜ ರೇಕುಳಗಿ, ಮಿಟ್ಟು ಸಿಂಗ್, ರಾಜು ಔರಾದ್ ತಾಂಡಾ, ಲೋಕೋಪಯೋಗಿ ಇಲಾಖೆ ಎಇಇ ಭಗವಾನ್ ಸಿಂಗ್ ಇತರರಿದ್ದರು.