

ಬೀದರ್: ವಿಮಾ ಪ್ರತಿನಿಧಿಗಳ ವೃತ್ತಿ ಸಂರಕ್ಷಣಾ ದಿನಾಚರಣೆ ಪ್ರಯುಕ್ತ ಲೈಫ್ ಇನ್ಶೂರೆನ್ಸ್ ಏಜೆಂಟ್ಸ್ ಫೆಡರೇಷನ್ ಆಫ್ ಇಂಡಿಯಾದ ಬೀದರ್ ಶಾಖೆ ವತಿಯಿಂದ ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಶುಕ್ರವಾರ 200 ರೋಗಿಗಳಿಗೆ ಆಹಾರ ಪೊಟ್ಟಣ ಉಚಿತವಾಗಿ ವಿತರಿಸಲಾಯಿತು.
ಫೆಡರೇಷನ್ ಬೀದರ್ ಶಾಖೆಯ ಅಧ್ಯಕ್ಷ ಶರಣು ಹಣಮಶೆಟ್ಟೆ ಸೋನಾಳ್ ನೇತೃತ್ವದಲ್ಲಿ ರೋಗಿಗಳು ಹಾಗೂ ಅವರ ಕುಟುಂಬದ ಸದಸ್ಯರಿಗೆ ಪೊಟ್ಟಣ ವಿತರಣೆ ಮಾಡಲಾಯಿತು.
ಫೆಡರೇಷನ್ ವಿಭಾಗೀಯ ನಿರ್ದೇಶಕ ಜಿ.ಸಿ. ಗಂಗಶೆಟ್ಟಿ, ಬೀದರ್ ಶಾಖೆ ಗೌರವಾಧ್ಯಕ್ಷ ಸನ್ಮುಖಯ್ಯ ಸ್ವಾಮಿ, ಕಾರ್ಯದರ್ಶಿ ರೇವಣಸಿದ್ದಪ್ಪ ಬುಳ್ಳಾ, ಕೋಶಾಧ್ಯಕ್ಷ ಗಣಪತಿ ರಾಜೇಶ್ವರೆ, ಸಂಘಟನಾ ಕಾರ್ಯದರ್ಶಿ ರಮೇಶ ಶೆಕೋಬಾ, ಗೌರವ ಸಲಹೆಗಾರ ದೇವೇಂದ್ರ ಡಿಗ್ಗಿ, ಹಿರಿಯ ನಿರ್ದೇಶಕ ಗಣಪತಿ ಸೋಲಾಪುರೆ, ಸಿಎಲ್‍ಐಎ ಸಂಚಾಲಕ ಶಿವಾನಂದ ಸ್ವಾಮಿ, ವಿಮಾ ಸಲಹೆಗಾರ ಪವನಕುಮಾರ ಬಿರಾದಾರ ಮತ್ತಿತರರು ಇದ್ದರು.