ಬಸಪ್ಪ ಮಹಾರಾಜ ಮಂದಿರ ಉದ್ಘಾಟನೆ

Basappa Maharaj Mandir Opening Chandoori
Published on

ಬೀದರ್: ಕಮಲನಗರ ತಾಲ್ಲೂಕಿನ ಚಾಂದೋರಿ ಗ್ರಾಮದಲ್ಲಿ ಬಸಪ್ಪ ಮಹಾರಾಜ (ಬಂಗಲಾ) ಮಂದಿರ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಸಂಭ್ರಮ, ಸಡಗರದಿಂದ ನೆರವೇರಿತು.

ಮಂದಿರದಲ್ಲಿ ವಿಶೇಷ ಪೂಜೆ, ಹೋಮ, ಹವನ, ಭಜನೆ, ಅನ್ನ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ತೆಲಂಗಾಣದ ಗುರುಸ್ವಾಮಿ ಗುಂಡೆಕಲ್ಲೂರ ಹಾಗೂ ಹುಲ್ಯಾಳದ ಬಾಪುರಾವ್ ಮೋರೆ ಮಹಾರಾಜರು ಜಂಟಿಯಾಗಿ ಬಸಪ್ಪ ಮಹಾರಾಜರ ಮೂರ್ತಿ ಪ್ರತಿಷ್ಠಾಪಿಸಿ, ಮಂದಿರವನ್ನು ಉದ್ಘಾಟಿಸಿದರು.

ಬಸಪ್ಪ ಮಹಾರಾಜರು ದೈವಿ ಪುರುಷರಾಗಿದ್ದರು. ಭಕ್ತರ ಉದ್ಧಾರಕ್ಕೆ ಶ್ರಮಿಸಿದ್ದರು. ಅವರ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಬಸಪ್ಪ ಮಹಾರಾಜರ ತೊಟ್ಟಿಲು ಕಾರ್ಯಕ್ರಮ ನಡೆಯಿತು. ಏಕತಾ ಫೌಂಡೇಷನ್ ಅಧ್ಯಕ್ಷ ರವೀಂದ್ರ ಸ್ವಾಮಿ ಹಾಗೂ ಮರಾಠ ಸಮಾಜದ ಮುಖಂಡ ದೀಪಕ್ ಪಾಟೀಲ ಚಾಂದೋರಿ ಅವರನ್ನು ಬಸಪ್ಪ ದೇವಸ್ಥಾನ ಪಂಚ ಕಮಿಟಿ ವತಿಯಿಂದ ಶಾಲು ಹೊದಿಸಿ, ಪೇಟ ತೊಡಿಸಿ ಸನ್ಮಾನಿಸಲಾಯಿತು.

ಮಂದಿರ ಉದ್ಘಾಟನೆ ನಿಮಿತ್ತ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮಂದಿರವನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಮನೆಗಳ ಮುಂದೆ ರಂಗೋಲಿ ಹಾಕಲಾಗಿತ್ತು.

ರಾಜು ಪಾಟೀಲ ಗುಂಡೆಕಲ್ಲೂರ, ಮುಖಂಡರಾದ ಸಂಜೀವ್ ಬಿರಾದಾರ, ಮಹಾದೇವ ಪಾಂಚಾಳ್, ಹರಿಬಾ ಸಾಗಾವೆ, ಕಾಳಿದಾಸ ಮುಳೆ, ನಿರಂಜನ ಸ್ವಾಮಿ, ಸಾಯಿನಾಥ ಪಾಟೀಲ, ಮಹಾದೇವ ಸಾಗಾವೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net