ಪ್ರತಿಭಾ ಕಾರಂಜಿ: ಕಮಠಾಣ ವಿದ್ಯಾರ್ಥಿನಿಯರ ಸಾಧನೆ

Kamthan High School Prabha Karanji Achievers
Published on

ಬೀದರ್: ತಾಲ್ಲೂಕಿನ ಕಮಠಾಣದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದ ಸ್ಪರ್ಧೆಗಳಲ್ಲಿ ಸಾಧನೆಗೈದು ಗಮನ ಸೆಳೆದಿದ್ದಾರೆ.

ಚರ್ಚಾ ಸ್ಪರ್ಧೆಯಲ್ಲಿ ಶಾಲೆಯ 10ನೇ ವಿದ್ಯಾರ್ಥಿನಿ ಅಕ್ಷತಾ ಮಾಲೆ ರಾಜ್ಯಮಟ್ಟಕ್ಕೆ ಆಯ್ಕೆಯಾದರೆ, ಕನ್ನಡ ಭಾಷಣ ಸ್ಪರ್ಧೆಯಲ್ಲಿ 8ನೇ ತರಗತಿಯ ಶ್ರೇಯಾ ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದರು.

ಬೀದರ್‍ನಲ್ಲಿ ನಡೆದ ಸ್ಪರ್ಧೆಯಲ್ಲಿ ನೋಡಲ್ ಅಧಿಕಾರಿ ಗುಂಡಪ್ಪ ಹುಡಗೆ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರ ಪ್ರದಾನ ಮಾಡಿದರು.

ವಿದ್ಯಾರ್ಥಿಗಳ ಸಾಧನೆಗೆ ಎಸ್‍ಡಿಎಂಸಿ ಅಧ್ಯಕ್ಷ ಗದಗೆಪ್ಪ ಕ್ಯಾಸಾ, ಮುಖ್ಯಶಿಕ್ಷಕ ರವಿಕುಮಾರ, ಶಿಕ್ಷಕರಾದ ಶ್ರೀದೇವಿ ವಿ. ಪಾಟೀಲ, ಸಂಗೀತಾ ಮೈನಾಳೆ, ಶಿವಲಿಂಗಯ್ಯ ಸ್ವಾಮಿ, ಮಹೇಶ ದುಬೆ, ಅಶೋಕ ಸಿಂಧೆ, ಭೀಮರಾವ್ ಗೌಳೆ, ಬಸಪ್ಪ ಪೂಜಾರಿ, ಜಗದೇವಿ ಸಾವಲೆ, ಸರೋಜಾ, ಸ್ವರೂಪಾರಾಣಿ, ಸಂದೀಪ್, ಕವಿತಾ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net