

ಬೀದರ್: ಭಾಲ್ಕಿಯ ದಾಡಗಿ ಕ್ರಾಸ್ ಹತ್ತಿರ ರಾತ್ರಿ ವೇಳೆ ಟ್ರ್ಯಾಕ್ಟರ್ ತಾಗಿ ಬಸವಣ್ಣನವರ ಮೂರ್ತಿ ಭಗ್ನವಾಗಿದೆ. ಇದರಲ್ಲಿ ಯಾವುದೇ ಕಿಡಿಕೇಡಿ ಕೃತ್ಯ ಕಂಡುಬಂದಿಲ್ಲ ಎಂದು ಎಸ್ಪಿ ತಿಳಿಸಿದ್ದು, ಆರೋಪಿ ಚಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಘಟನೆಯ ಬಗ್ಗೆ ನನಗೆ ಮಾಹಿತಿ ಸಿಕ್ಕ ಕೂಡಲೇ ಕ್ರಮ ವಹಿಸುವಂತೆ ಪೊಲೀಸರಿಗೆ ಸೂಚಿಸಿದ್ದೆ. ಹಾನಿಯಾಗಿರುವ ಬಸವೇಶ್ವರರ ಮೂರ್ತಿಯ ಸ್ಥಳದಲ್ಲಿ ಹೊಸ ಮೂರ್ತಿ ಸ್ಥಾಪಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿರುವೆ. ಜನರು ಶಾಂತಿ ಕಾಪಾಡುವಂತೆ ಮನವಿ ಮಾಡುವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.