

ಬೀದರ್: ಗ್ರಾಮೀಣ ಭಾಗದಲ್ಲಿ ದಶಕದಿಂದ ನನೆಗುದಿಗೆ ಬಿದ್ದಿರುವ ಪೋಡಿ ಪ್ರಕರಣಗಳಿಗೆ ಶಾಶ್ವತ ಪರಿಹಾರ ಒದಗಿಸಲು ಅಭಿಯಾನ ಆರಂಭಿಸಿದ್ದು, ಜನತೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಕೋರಿದರು.
ಔರಾದ್(ಎಸ್)ನಲ್ಲಿ ಆಯೋಜಿಸಿದ್ದ ಪೋಡಿಮುಕ್ತ ಗ್ರಾಮ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಅರ್ಜಿ ಸಲ್ಲಿಸದಿದ್ದರೂ ಊರಿನ ಎಲ್ಲ ಆಸ್ತಿಗಳ ಭೂಮಾಪನ ಪೂರ್ಣಗೊಳಿಸಿ ಪೋಡಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪ್ರತಿ ಗ್ರಾಮಕ್ಕೆ ನಾಲ್ವರು ಭೂಮಾಪಕರ ನಿಯೋಜಿಸಿದ್ದು, ಭೂ ದಾಖಲೆಗಳಲ್ಲಿನ ತಪ್ಪುಗಳನ್ನು ಸರಿಪಡಿಸಲು ಅಕಾರಿಯನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
ಎನ್.ಬಿ. ರಡ್ಡಿ ಗುರೂಜಿ, ಗ್ರಾಪಂ ಅಧ್ಯಕ್ಷ ವೆಂಕಟರಡ್ಡಿ ಪೋಗಲ್, ತಹಸೀಲ್ದಾರ್ ಡಿ.ಜಿ. ಮಹತ್, ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ಗುರುನಾಥ ರಾಜಗೀರಾ, ಪ್ರಮುಖರಾದ ರಾಜರಡ್ಡಿ ಶಾಬಾದ್, ಸುರೇಶ ಮಾಶೆಟ್ಟಿ, ನಾಗಭೂಷಣ ಕಮಠಾಣ, ಸೂರ್ಯಕಾಂತ ಸೇಡಂ, ನರಸಿಂಹರಡ್ಡಿ ಗಂಗಾವರ್, ನಾಗಶೆಟ್ಟಿ ಚಟ್ನಳ್ಳಿ, ಹೇಮಾ ತುಕ್ಕಾರಡ್ಡಿ, ರಾಜಕುಮಾರ ಜಾಧವ್, ಮಾರುತಿ ನಾಗನಕೇರಿ, ಮಲ್ಲಿಕಾರ್ಜನ ಭೈರನಳ್ಳಿಕರ್, ಜಗನ್ನಾಥರಡ್ಡಿ ಚಿನ್ನಾರಡ್ಡಿ, ವೀರಶೆಟ್ಟಿ ಸೇಡಂ, ಜಗನ್ನಾಥ ಚಿಟಗುಪ್ಪ, ಡಿಡಿಎಲ್ಆರ್ ಶಂಕರ, ಎಡಿಎಲ್ಆರ್ ಮಲ್ಲಿಕಾರ್ಜುನ, ಪಿಡಿಒ ರೇವಣ್ಣಪ್ಪ ಇತರರಿದ್ದರು.