ಸೋಯಾಬೀನ್ ಖರೀದಿ ಕೇಂದ್ರ ಪುನಃರಾರಂಭಿಸಿ

Prabhu Mulge - Copy
Published on

ಬೀದರ್: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸೋಯಾಬೀನ್ ಖರೀದಿ ಕೇಂದ್ರಗಳನ್ನು ಪುನಃರಾರಂಭಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭು ಮೂಲಗೆ ಆಗ್ರಹಿಸಿದ್ದಾರೆ.

ಈ ಕುರಿತು ಅವರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಜನವರಿ 2 ರಿಂದ ಸೋಯಾಬೀನ್ ಖರೀದಿ ಕೇಂದ್ರ ಬಂದ್ ಮಾಡಿದ್ದರಿಂದ ನೋಂದಣಿ ಮಾಡಿಸಿರುವ ಸಾವಿರಾರು ರೈತರು ಯೋಜನೆಯ ಲಾಭದಿಂದ ವಂಚಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಾಕಷ್ಟು ರೈತರು ತೊಗರಿ ಹಾಗೂ ಕಡಲೆ ಕಾಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು, ಯೋಜನೆಯಡಿ ತೊಗರಿ ಹಾಗೂ ಕಡಲೆ ಖರೀದಿ ಕೇಂದ್ರಗಳನ್ನೂ ಆರಂಭಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net