

ಬೀದರ್: ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸೂರ್ಯಕಾಂತ ವಗದಾಳೆ ಹಾಗೂ ಉಪಾಧ್ಯಕ್ಷರಾಗಿ ರಾಮಲು ಹೊಕ್ರಾಣ(ಬಿ) ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ಈಚೆಗೆ ನಡೆದ ಚುನಾವಣೆಯಲ್ಲಿ ಅವರು ಆಯ್ಕೆಯಾದರು. 12 ಸದಸ್ಯ ಬಲದ ಸಂಘದಲ್ಲಿ ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಅನಿಲಕುಮಾರ ಪನ್ನಾಳೆ ಅವರ ಬೆಂಬಲಿತ 8 ನಿರ್ದೇಶಕರಿದ್ದಾರೆ. ವಗದಾಳೆ ಅಧ್ಯಕ್ಷ ಮತ್ತು ರಾಮಲು ಉಪಾಧ್ಯಕ್ಷರಾಗಿ ಆಯ್ಕೆ ಆಗುವುದರೊಂದಿಗೆ ಸಂಘ ಪನ್ನಾಳೆ ಬೆಂಬಲಿಗರ ಕೈವಶವಾಗಿದೆ.
ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ರೈತರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಅನಿಲಕುಮಾರ ಪನ್ನಾಳೆ ಸಲಹೆ ಮಾಡಿದರು.
ನಿರ್ದೇಶಕರಾದ ಸಂಗಪ್ಪ ಮಡಕಿ, ರಾವುಸಾಬ್ ಸಾವಜಿ, ಅರುಣರೆಡ್ಡಿ ಪಾಟೀಲ, ಪೂಜಾ ರಾಜಕುಮಾರ, ಗ್ರಾಮದ ಪ್ರಮುಖರಾದ ನಾಗೇಶ ಬೆಳಕೇರಿ, ವಿಜಯಕುಮಾರ ಗಣಾಪುರ, ಆಜಂಅಲಿ ಸೌದಾಗರ, ಮಹೇಶ ಕೋಟೆ, ಸೂರ್ಯಕಾಂತ ಮಡಕಿ, ಖದೀರ್ ಯಾಕತಪುರ, ಶಂಕರ ಬಾಬು ಮತ್ತಿತರರು ಇದ್ದರು.