82 ಮಂದಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ

Award - Copy
Published on

ಬೀದರ್: ಧಾರವಾಡದ ಕರ್ನಾಟಕ ರಾಜ್ಯ ಶಿಕ್ಷಕರ ಪರಿಷತ್ ಹಾಗೂ ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಶನಿವಾರ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ 82 ಮಂದಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.

50 ಮಂದಿಗೆ ಆದರ್ಶ ದಂಪತಿ, 18 ಮಂದಿಗೆ ಸಾವಿತ್ರಿಬಾಯಿ ಶಿಕ್ಷಣ ಸೇವಾ ರತ್ನ, 12 ಮಂದಿಗೆ ಶೇಖ್ ಫಾತಿಮಾ ಶಿಕ್ಷಣ ಸೇವಾ ರತ್ನ ಹಾಗೂಇಬ್ಬರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದ್ದಕ್ಕೆ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮೆಚ್ಚುಗೆ ವ್ಯಕ್ತಪಡಿಸಿದರು.

ದಿನದರ್ಶಿಕೆ ಬಿಡುಗಡೆ ಮಾಡಿದ ಧಾರವಾಡದ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ರಾಜ್ಯ ಅಧ್ಯಕ್ಷ ಸಂಗಮೇಶ ಡಿ. ಖನ್ನಿನಾಯ್ಕರ್ ಅವರು, ಸಂಘ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ಸದಾ ಸಿದ್ಧವಿದೆ ಎಂದು ತಿಳಿಸಿದರು.

ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಉಪ ನಿರ್ದೇಶಕ ಪ್ರೇಮಸಾಗರ್ ದಾಂಡೇಕರ್ ಅವರು ಸಂಘದ ಪಾಕೇಟ್ ಡೇರಿ ಬಿಡುಗಡೆ ಮಾಡಿದರು.

ಪ್ರೊ. ಶಿವಶರಣಪ್ಪ ಹುಗ್ಗೆ ಪಾಟೀಲ ವಿಶೇಷ ಉಪನ್ಯಾಸ ನೀಡಿದರು. ಪರಿಷತ್ ವಿಭಾಗೀಯ ಸಂಚಾಲಕ ದೇವಿಪ್ರಸಾದ್ ಕಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಂಸ್ಕøತಿಕ ಕಾರ್ಯಕ್ರಮಗಳು ನೌಕರರ ಮನ ರಂಜಿಸಿದವು.

ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ, ಪ್ರಮುಖರಾದ ಶಂಕರೆಪ್ಪ ಎಸ್. ಘಟ್ಟಿ, ಅಬ್ದುಲ್ ಹಸೀಬ್, ಟಿ.ಆರ್. ದೊಡ್ಡೆ, ಬಸವಂತರಾಯ ಜಿಡ್ಡೆ, ಡಿ. ಝಾಕೀರ್ ಹುಸೇನ್, ರಾಘವೇಂದ್ರ ಕುಲಕರ್ಣಿ, ಸಾರಿಕಾ ಗಂಗಾ, ದಾನಿ ಬಾಬುರಾವ್, ಸಂಜೀವಕುಮಾರ ಸ್ವಾಮಿ, ದಿಲೀಪಕುಮಾರ ಡೊಂಗರಗೆ, ಗಣಪತಿ ಭಕ್ತಾ, ಸುರೇಶ ಟಾಳೆ, ವಿಜಯಕುಮಾರ ಪಾಟೀಲ, ಶಿವಕುಮಾರ ಸದಾಫುಲೆ, ಸಂಜೀವ ಬಿ. ಸೂರ್ಯವಂಶಿ, ವಿಷ್ಣುಕಾಂತ ಠಾಕೂರ್, ದಶರಥ ಕುಪ್ಪೆಕರ್, ಗೋವಿಂದ ಪೂಜಾರಿ, ವೈಜಿನಾಥ ಸಾಗರ್, ವೈಜಿನಾಥ ಸಾಳೆ, ಮಲ್ಲಿಕಾರ್ಜುನ ಟಂಕಸಾಲೆ, ಕುಪೇಂದ್ರ ಜಗಶೆಟ್ಟಿ, ಚನ್ನಬಸವ ಬಿರಾದಾರ, ಅಂದಾನಂದ ಗೌಡ, ಇಂದ್ರಕಾಂತ ದೊಡ್ಡೆ, ಕಸ್ತೂರಿ ಪಟಪಳ್ಳಿ, ಚಂದ್ರಕಾಂತ ದಂಡೆ ಇದ್ದರು.

ಬಳವಂತರಾವ್ ರಾಠೋಡ್ ಸ್ವಾಗತಿಸಿದರು. ಶಿಂಗೆ ಸೂರ್ಯಕಾಂತ ನಿರೂಪಿಸಿದರು. ಸುವರ್ಣಾ ವಾಘಮಾರೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net