ಕೈಲಾದಷ್ಟು ದಾಸೋಹ ಮಾಡಲು ಮನವಿ

shivkumar patil
Published on
ಭಾಲ್ಕಿ: ತ್ರಿವಿಧ ದಾಸೋಹಿ, ಮಾನವೀಯತೆಯ ನೈಜ ಪರಿಪಾಲಕ ತುಮಕೂರಿನ ಶ್ರೀ ಶಿವಕುಮಾರ ಮಹಾಸ್ವಾಮೀಜಿಯ 6ನೇ ಪುಣ್ಯ ಸ್ಮರಣೆ ನಿಮಿತ್ತ ಜ.21ರಂದು ಭಕ್ತರು ಪೂಜ್ಯರ ಹೆಸರಿನಲ್ಲಿ ಕೈಲಾದಷ್ಟು ದಾಸೋಹ ಮಾಡುವುದರ ಮೂಲಕ ದಾಸೋಹ ದಿನ  ಆಚರಿಸಬೇಕು ಎಂದು ಶ್ರೀ ಸಿದ್ಧಗಂಗಾ ಹಳೇ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ್ ಪಾಟೀಲ ತೇಗಂಪೂರ ತಿಳಿಸಿದ್ದಾರೆ.
ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ನ, ಆಶ್ರಯ, ಶಿಕ್ಷಣ ನೀಡಿ ಸಾವಿರಾರೂ ವಿದ್ಯಾರ್ಥಿಗಳ ಬಾಳು ಬೆಳಗಿರುವ ಶ್ರೀ ಶಿವಕುಮಾರ ಸ್ವಾಮೀಜಿ ನಡೆದಾಡುವ ದೇವರು ಆಗಿದ್ದರು. ಜಿಲ್ಲೆಯಲ್ಲಿರುವ ಶಿವಕುಮಾರ ಸ್ವಾಮೀಜಿ ಅವರ ಭಕ್ತರು, ಸಿದ್ಧಗಂಗಾದ ಹಳೇ ವಿದ್ಯಾರ್ಥಿಗಳು ತಮ್ಮ ಕೈಲಾದಷ್ಟು ದಾಸೋಹ ಮಾಡುವುದರ ಮೂಲಕ ಮೂರನೇ ಪುಣ್ಯ ಸ್ಮರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net