

ಬೀದರ್: ರಂಜೋಳಖೇಣಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್)ದ ನೂತನ ಅಧ್ಯಕ್ಷರಾಗಿ ಶಿವಶರಣಪ್ಪ ಶಂಕ್ರೆಪ್ಪ ಹಳ್ಳಿಖೇಡ್, ಉಪಾಧ್ಯಕ್ಷರಾಗಿ ಧನರಾಜ ಶಂಕರ ಖಜ್ಜಿ ಶನಿವಾರ ಆಯ್ಕೆಯಾಗಿದ್ದಾರೆ.
ಆಯ್ಕೆ ನಂತರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿ ಅಭಿನಂದಿಸಿದರು. ನಿರ್ದೇಶಕರಾದ ನಾಗರಡ್ಡಿ, ನಿಂಗಾರಡ್ಡಿ, ರಾಜಪ್ಪ ಶಿವರಾಜ, ಕಸ್ತೂರಬಾಯಿ ವಿಠ್ಠಲರಾವ, ಈರಪ್ಪ ಮಣಿಕಪ್ಪ, ಮನೋಹರ ನಿಂಗಪ್ಪ, ಲಕ್ಷ್ಮೀಬಾಯಿ ಬಸವರಾಜ, ಈರಮ್ಮ ಶಂಕ್ರೆಪ್ಪ, ಹಮೀದ್ಮಿಯ್ಯಾ ಮಸ್ತಾನ್ಸಾಬ್, ಅನೀಲಕುಮಾರ ಮಡೆಪ್ಪ, ಶರೀಫ್ಮಿಯ್ಯಾ, ಸಿಇಒ ಶಂಕರ ರಂಜೋಳಕರ್, ಚುನಾವಣಾಕಾರಿ ಬಸವರಾಜ ಬೆಳಕೇರಿ ಇದ್ದರು.