

ಭಾಲ್ಕಿ: ಹಾಲಹಳ್ಳಿ(ಕೆ) ಹೊರವಲಯದ ಕೊಳ್ಳದಲ್ಲಿ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ ಶ್ರದ್ಧಾ ಭಕ್ತಿಯೊಂದಿಗೆ ಇತ್ತೀಚೆಗೆ ಜರುಗಿತು.
ಬೇಮಳಖೇಡ-ಗೋರ್ಟಾ ಮಠದ ಶ್ರೀ ಡಾ.ರಾಜಶೇಖರ ಶಿವಾಚಾರ್ಯ ಸಾನ್ನಿಧ್ಯದಲ್ಲಿ ಮೂರು ದಿನ ಸಾಮೂಹಿಕ ಲಕ್ಷ ಬಿಲ್ವಾರ್ಚನೆ, ರುದ್ರಾಭಿಷೇಕ, ಮಹಾ ಮಂಗಳಾರತಿ, ಪಲ್ಲಕ್ಕಿ ಉತ್ಸವ, ಅಗ್ಗಿ ಪೂಜೆ ಸೇರಿ ವಿವಿಧ ಕಾರ್ಯಕ್ರಮಗಳು ನಡೆದವು.
ಧರ್ಮಸಭೆಯನ್ನು ಸಂಸದ ಸಾಗರ ಖಂಡ್ರೆ ಉದ್ಘಾಟಿಸಿದರು. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಭಾಲ್ಕಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ ಮಾತನಾಡಿದರು. ಶ್ರೀ ಗಂಗಾಧರ ಸ್ವಾಮೀಜಿ, ಬಾಬುರಾವ ಮಹಾರಾಜ, ಗಂಗಶೆಟ್ಟಿ, ವಿವೇಕ ವಾಲಿ, ಅಶೋಕ ಜಾಧವ್, ರಮೇಶ ಪಾಟೀಲ್, ನೀಲಕಂಠ ಪಾಟೀಲ್, ಶಿವಮೂರ್ತಿ ಸ್ವಾಮಿ, ಮಾಣಿಕಪ್ಪ ಹಾವಶೆಟ್ಟಿ, ಬಸಯ್ಯ ಸ್ವಾಮಿ, ಬಸವರಾಜ ಹಾಲಹಳ್ಳಿ, ಸಂಜುಕುಮಾರ ಡೊಳ್ಳಿ, ಬಸವರಾಜ ಪಾಟೀಲ್, ಶಿವು ಪೂಜಾರಿ, ಡಾ.ಶಾಂತವೀರ ಸ್ವಾಮಿ, ರಾಜಕುಮಾರ ನಿಂಗಬಾಶೆಟ್ಟಿ, ಬಸಯ್ಯ ಮಠ, ಶಿವಕುಮಾರ ಡೊಂಗರಗಿ ಇತರರಿದ್ದರು.