ತಂದೆ-ತಾಯಿ ಸೇವೆ ಶ್ರೇಷ್ಠ

Oplus_131072
Oplus_131072
Published on

ಬಸವಕಲ್ಯಾಣ: ಮಕ್ಕಳ ಏಳಿಗೆಯಲ್ಲಿ ಸಾರ್ಥಕತೆ ಕಾಣುವ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ತಪ್ಪು. ದೇವರನ್ನು ಪೂಜಿಸಿದಂತೆ ಪಾಲಕರನ್ನು ನೋಡಿಕೊಂಡು ಪಾಲನೆ, ಪೋಷಣೆ ಮಾಡಬೇಕು ಎಂದು ಹಾರಕೂಡದ ಪೂಜ್ಯ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.

ಆಲಗೂಡ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿದ್ದ 38ನೇ ಶಿವಾನುಭವ ಚಿಂತನ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ತಂದೆ-ತಾಯಿ ಹಾಗೂ ಗುರುಗಳನ್ನು ದೇವರ ಸ್ಥಾನದಲ್ಲಿ ಇರಿಸಿ ಪೂಜಿಸಬೇಕು ಎಂದರು.

ಸನ್ಮಾರ್ಗದಲ್ಲಿ ನಡೆದರೂ ನಿಂದೆಗಳು ಬರುವುದು ಸಹಜ. ನಿಂದನೆಗೆ ಧೃತಿಗೆಡದೆ ಸರ್ವರಿಗೂ ಪ್ರೀತಿಯಿಂದ ಹಿತವನ್ನೇ ಬಯಸುವಾತ ದೇವ ಮಾನವನಾಗುತ್ತಾನೆ ಎಂದು ಹೇಳಿದರು.

ಗುರು ಭಕ್ತಿಯನ್ನೇ ಉಸಿರಾಗಿಸಿಕೊಂಡು ಸತ್ಕಾರ್ಯಗಳನ್ನು ಮಾಡುತ್ತಿರುವ ಆಲಗೂಡ ಜನತೆಗೆ ಶ್ರೀ ವೀರಭದ್ರೇಶ್ವರ ಹಾಗೂ ಹಾರಕೂಡನ ಶ್ರೀ ಚನ್ನಬಸವ ಶಿವಯೋಗಿಗಳ ದಿವ್ಯ ಕೃಪೆಯಿಂದ ಶ್ರೇಯಸ್ಸಿನ ಬದುಕು ಸಾಧ್ಯವಾಗಲಿ ಎಂದು ಹಾರೈಸಿದರು.

ಶಾಸಕ ಶರಣು ಸಲಗರ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಪ್ರವಚನಕಾರ ದಯಾನಂದ ಹಿರೇಮಠ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಗ್ರಾಪಂ ಅಧ್ಯಕ್ಷೆ ಮೇಘಾ ಸಗರ, ಪಿಎಸ್ಐ ಸುವರ್ಣಾ ಮಲ್ಲಶೆಟ್ಟಿ, ಶರಣು ಆಲಗೂಡ, ನಾಗೇಶ ಸ್ವಾಮಿ, ಶರಣಪ್ಪ ಬಂಗಾರೆ, ಬಸಯ್ಯ ಸ್ವಾಮಿ, ಗುಲಾಬ ಪಾಟೀಲ್, ಗಣೇಶ ಸೋಮವಂಶೆ, ಮೋಹನ ಉಕ್ಕಾವಲೆ ಇತರರಿದ್ದರು. ರವಿ ಠಮಕೆ ಸ್ವಾಗತಿಸಿದರು. ನವಲಿಂಗ ಪಾಟೀಲ್ ನಿರೂಪಣೆ ಮಾಡಿದರು. ಗುರುನಾಥ ಬಡದಾಳೆ ವಂದಿಸಿದರು. ಭಾಗ್ಯ ಮಠಪತಿ ವಚನ ಗಾಯನ ಪ್ರಸ್ತುತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net