ನೌಬಾದ್ ಪಿಕೆಪಿಎಸ್ ಗೆ ಆಯ್ಕೆ

Noubad
Published on

ಬೀದರ್: ನೌಬಾದ್ ನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್)ದ ನಿರ್ದೇಶಕ ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜಗದೇವಿ ಶಾಮರಾವ ಪೊಲೀಸ್ ಪಾಟೀಲ್ ಪೆನಾಲ್ ಭರ್ಜರಿ ಜಯಗಳಿಸಿದೆ.

ಚನ್ನಬಸಪ್ಪ ಹೆಗ್ಗೆ, ಶಾಮರಾವ ಪೊಲೀಸ್ ಪಾಟೀಲ್, ಸೋಮನಾಥ ಬೊರಂಚಿ, ಚೆನ್ನಪ ಕತ್ತೆ, ಸುಭಾಷ ಮಾಣಿಕಪ್ಪ, ಮಲ್ಲಯ್ಯ ಬಸಯ್ಯ, ಸರಸ್ವತಿ ಚೊಂಡಿ, ಪ್ರೀತಮ್ಮಾ ಮಾಳಪ್ಪ, ಭೀಮಣ್ಣ ತುಕಾರಾಮ, ಪ್ರವೀಣಕುಮಾರ ಬಾಬುರಾವ, ಮಹೇಶ ಬಸವರಾಜ, ಸೂರ್ಯಕಾಂತ ಚಂದ್ರಪ್ಪ ಗೆಲುವು ಸಾಧಿಸಿದ್ದಾರೆ.

ನಂತರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಶಶಿಕುಮಾರ ಪೊಲೀಸ್ ಪಾಟೀಲ್, ಸುನೀಲ ಬಿ.ಕೆ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net