

ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಜನ್ಮದಿನದ ಪ್ರಯುಕ್ತ ವಿ.ಎನ್. ಅಪ್ಪೆ ಫೌಂಡೇಷನ್ ನಿಂದ ನಗರದಲ್ಲಿ 251 ಬೈಕ್ ಸವಾರರಿಗೆ ಉಚಿತ ಹೆಲ್ಮೆಟ್ ವಿತರಿಸಲಾಯಿತು.
ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಹೆಲ್ಮೆಟ್ ವಿತರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಚಾಲನೆ ನೀಡಿದರು. ಫೌಂಡೇಷನ್ ಮುಖ್ಯಸ್ಥರೂ ಆದ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದಕುಮಾರ ಅಪ್ಪೆ, ನಗರಸಭೆ ಅಧ್ಯಕ್ಷ ಗೌಸೊದ್ದೀನ್, ಮುಖಂಡರಾದ ಮನ್ನಾನ್ ಸೇಠ, ಇರ್ಷಾದ್ ಪೈಲ್ವಾನ್, ರಿಯಾಜ್, ಹಣಮಂತ ಮಲ್ಕಾಪುರೆ, ಸೂರ್ಯಕಾಂತ ಸಾದುರೆ, ಪವನ್ ಮಿಠಾರೆ, ಶಿವರಾಜ ಹಾಸನಕರ್, ಗೌತಮ ಮುತ್ತಂಗಿಕರ ಇತರರಿದ್ದರು.