ಬ್ಯಾಲಹಳ್ಳಿ ಪಿಕೆಪಿಎಸ್ ಅಧ್ಯಕ್ಷರಾಗಿ ರಾಜಕುಮಾರ

pkps photo
Published on

ಬೀದರ್: ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರಾಜಕುಮಾರ ಕಾಶಿನಾಥ ತೂಗಾಂವೆ ಹಾಲಹಳ್ಳಿ ಹಾಗೂ ಉಪಾಧ್ಯಕ್ಷರಾಗಿ ಓಂಕಾರ ಕಾಶಿನಾಥ ರುದ್ರಾ ಹಾಲಹಳ್ಳಿ(ಕೆ) ಶುಕ್ರವಾರ ಆಯ್ಕೆಯಾದರು.

ಚುನಾವಣಾಧಿಕಾರಿ ಆಯ್ಕೆಯನ್ನು ಪ್ರಕಟಿಸುತ್ತಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ, ಸಂಭ್ರಮಿಸಿದರು. ಶಾಲು ಹೊದಿಸಿ ಸತ್ಕರಿಸಿದರು.

ಭಾಲ್ಕಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ಸಂಘದ ನಿರ್ದೇಶಕರಾದ ಓಂಕಾರ ಮಲ್ಲಪ್ಪ ಕೇರಿ, ಗಜೇಂದ್ರ ದಿಗಂಬರ್ ಸದಾಶಿವ, ಸುರೇಶ ವಸುರಾಮ ಹಾಲಹಳ್ಳಿ ತಾಂಡಾ, ಸುಶೀಲಾಬಾಯಿ ಕಾಶೀನಾಥ ತೂಗಾಂವೆ ಹಾಲಹಳ್ಳಿ, ಅಫ್ಸರ್ ಅಲಿ ತಂದೆ ಚುನ್ನುಮಿಯಾ ಬೇಪಾರಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net