ಒತ್ತುವರಿ ತೆರವು: ಪಂಚಾಯಿತಿ ಸೂಚನೆ

Markal PDO Umesh Jaba - Copy
Published on

ಬೀದರ್: ತಾಲ್ಲೂಕಿನ ಮರಕಲ್ ಗ್ರಾಮ ಪಂಚಾಯಿತಿಯು ಮರಕಲ್, ಬೆನಕನಳ್ಳಿ ಹಾಗೂ ಚಿಕ್ಕಪೇಟೆ ಗ್ರಾಮಗಳಲ್ಲಿ ಚರಂಡಿ ಒತ್ತುವರಿ ತೆರವುಗೊಳಿಸಲು ಸಾರ್ವಜನಿಕರಿಗೆ ಸೂಚನೆ ನೀಡಿದೆ.

ಗ್ರಾಮಗಳಲ್ಲಿ ಬಹಳಷ್ಟು ಮನೆಗಳ ಮುಂಭಾಗದ ಚರಂಡಿಗಳನ್ನು ಒತ್ತುವರಿ ಮಾಡಲಾಗಿದ್ದು, ರಸ್ತೆಗಳು ಇಕ್ಕಟ್ಟಾಗಿವೆ. ಇದರಿಂದಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಅಪಘಾತಗಳಿಗೆ ಕಾರಣವಾಗುತ್ತಿದೆ. ಕಾರಣ, ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಒತ್ತುವರಿ ತೆರವುಗೊಳಿಸಲು ನಿರ್ಣಯಿಸಲಾಗಿದೆ ಎಂದು ಪಿಡಿಒ ಉಮೇಶ ಜಾಬಾ ತಿಳಿಸಿದ್ದಾರೆ.

ಸಾರ್ವಜನಿಕರು 15 ದಿನಗಳ ಒಳಗೆ ತಮ್ಮ ಮನೆಗಳ ಮುಂಭಾಗದ ಚರಂಡಿ ಒತ್ತುವರಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಜೆಸಿಬಿ ಬಳಸಿ ಒತ್ತುವರಿ ತೆರವುಗೊಳಿಸಲಾಗುವುದು. ಈ ವೇಳೆ ಕಟ್ಟಡಕ್ಕೆ ಯಾವುದೇ ರೀತಿಯ ಹಾನಿಯಾದರೆ ಪಂಚಾಯತಿ ಜವಾಬ್ದಾರ ಆಗಿರುವುದಿಲ್ಲ. ಜೆಸಿಬಿಗೆ ತಗಲುವ ವೆಚ್ಚ ಸಹ ಒತ್ತುವರಿದಾರರರಿಂದಲೇ ವಸೂಲಿ ಮಾಡಲಾಗುವುದು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net