ಗುಣಮಟ್ಟದ ಕಾಮಗಾರಿ ಆದ್ಯತೆಯಾಗಲಿ

Shembelli
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: NightHDR; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
Published on
ಔರಾದ: ಕ್ಷೇತ್ರದಲ್ಲಿ ಸಾರ್ವಜನಿಕರ ಅವಶ್ಯಕತೆಗೆ ಅನುಗುಣವಾಗಿ ಪ್ರತಿ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಎಲ್ಲ ಕೆಲಸಗಳು ಗುಣಮಟ್ಟದಿಂದ ಮಾಡಬೇಕೆಂದು ಶಾಸಕ ಪ್ರಭು ಚವ್ಹಾಣ ತಿಳಿಸಿದರು.
ತಾಲ್ಲೂಕಿನ ವಡಗಾಂವ ವ್ಯಾಪ್ತಿಯ ಚಟ್ನಾಳ, ಜೀರ್ಗಾ(ಬಿ), ಜೀರ್ಗಾ(ಜೆ), ಶೆಂಬೆಳ್ಳಿ, ಮುಸ್ತಾಪೂರ, ಧೂಪತಮಹಾಗಾಂವ, ಬಾಚೇಪಳ್ಳಿ, ಮಣಿಗೆಂಪೂರ, ಬಾಬಳಿ ಸೇರಿದಂತೆ ವಿವಿಧೆಡೆ ಜ.9ರಂದು ಗ್ರಾಮ ಸಂಚಾರ ನಡೆಸಿ ಅವರು ಮಾತನಾಡಿದರು.
ಜನರನ್ನು ಭೇಟಿ ಮಾಡಬೇಕು. ಗ್ರಾಮಗಳಲ್ಲಿ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಖುದ್ದಾಗಿ ಆಲಿಸಬೇಕು. ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಪ್ರಯತ್ನಿಸಬೇಕು. ಈಗಾಗಲೇ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಕೆಲಸಗಳು ಹೇಗೆ ನಡೆಯುತ್ತಿವೆ ಎನ್ನುವುದನ್ನು ವೀಕ್ಷಿಸಬೇಕು ಮತ್ತು ಗ್ರಾಮಗಳಲ್ಲಿ ಇನ್ನು ಏನೇನು ಕೆಲಸಗಳಾಗಬೇಕು ಎನ್ನುವುದನ್ನು ತಿಳುದುಕೊಳ್ಳಲು ಗ್ರಾಮ ಸಂಚಾರವನ್ನು ಮಾಡುತ್ತಾ ಬರುತ್ತಿದ್ದೇನೆ ಎಂದು ಹೇಳಿದರು.
ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲ ಗ್ರಾಮಗಳಲ್ಲಿ ಆದ್ಯತೆಗೆ ಅನುಗುಣ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಚಾಲ್ತಿಯಲ್ಲಿರುವ ಎಲ್ಲ ಕೆಲಸಗಳು ಗುಣಮಟ್ಟದಿಂದ ಆಗಬೇಕು. ಅಧಿಕಾರಿಗಳು ಕೇವಲ ಕಛೇರಿಗಳಿಗೆ ಮಾತ್ರ ಸೀಮಿತರಾಗದೇ ತಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೆಲಸಗಳನ್ನು ಪರಿಶೀಲಿಸಬೇಕು. ಕೆಲಸ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು. ಯೋಜನೆಗಳು ನಿಗದಿತ ಅವಧಿಯಲ್ಲಿ ಸಾಕಾರಗೊಂಡು ಸಾರ್ವಜನಿಕರಿಗೆ ಅನುಕೂ¯ ಮಾಡಿಕೊಡಲು ಪ್ರಯತ್ನಿಸಬೇಕು ಎಂದು ಸೂಚಿಸಿದರು. ಇದೇ ವೇಳೆ ರಸ್ತೆ, ಕುಡಿಯುವ ನೀರು, ಚರಂಡಿ, ವಿದ್ಯುತ್, ಶಾಲೆ, ಅಂಗನವಾಡಿ, ಆರೋಗ್ಯ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಆಲಿಸಿ, ಸಂಬAಧಪಟ್ಟ ಅಧಿಕಾರಿಗಳಿಗೆ ಕಾಲಮಿತಿಯಲ್ಲಿ ಕೆಲಸ ಮಾಡಿಕೊಡುವಂತೆ ನಿರ್ದೇಶನ ನೀಡಿದರು.
ಅಭಿವೃದ್ದಿ ಕೆಲಸಗಳಿಗೆ ಚಾಲನೆ: ಚಟ್ನಾಳ ಗ್ರಾಮದಲ್ಲಿ 4.5 ಲಕ್ಷದ ಸಮುದಾಯ ಭವನ, ಜೀರ್ಗಾ(ಬಿ), ಜೀರ್ಗಾ(ಕೆ), ಶೆಂಬೆಳ್ಳಿ ಹಾಗೂ ಮುಸ್ತಾಪೂರ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ 14 ಲಕ್ಷದ ದುರಸ್ತಿ, ಶುದ್ದ ಕುಡಿಯುವ ನೀರಿನ ಘಟಕ, ಸೋಲಾರ ಪೆನಲ್, ವಿದ್ಯುತಿಕರಣ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಮೃತ ವಿದ್ಯಾರ್ಥಿಯ ಕುಟುಂಬಸ್ಥರಿಗೆ ಸಾಂತ್ವನ: ಜೀರ್ಗಾ(ಬಿ) ಗ್ರಾಮದಲ್ಲಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿ ವಿಕಾಸ ಸೋಪಾನ್ ಅವರ ಮನೆಗೆ ಶಾಸಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರಲ್ಲದೇ ವೈಯಕ್ತಿಕ ಧನಸಹಾಯ ಮಾಡಿದರು. ನಾನು ಸದಾ ನಿಮ್ಮ ಜೊತೆಗಿದ್ದೇನೆ. ಏನೆ ಸಮಸ್ಯೆಯಿರಲಿ ನೇರವಾಗಿ ಭೇಟಿ ಮಾಡಿ ಎಂದು ಧೈರ್ಯ ತುಂಬಿದರು.
ಎಪಿಎಂಸಿ ಅಧ್ಯಕ್ಷ ಧೊಂಡಿಬಾ ನರೋಟೆ, ತಹಸೀಲ್ದಾರ ಮಲಶೆಟ್ಟಿ ಚಿದ್ರೆ, ತಾಪಂ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ತಾಲ್ಲೂಕು ಅಧಿಕಾರಿಗಳಾದ ಸುಭಾಷ, ಕ್ಷೇತ್ರ ಸುಧಾರಾಣಿ, ರವಿ ಕಾರಬಾರಿ, ಡಾ.ಗಾಯತ್ರಿ, ಧೂಳಪ್ಪ, ವೆಂಕಟರಾವ ಶಿಂಧೆ, ಇಮಲಪ್ಪಾ, ಪ್ರೇಮಸಾಗರ, ಪ್ರಕಾಶ ನಿಪ್ಪಾಣಿ, ಮುಖಂಡರಾದ ರಾಮಶಟ್ಟಿ ಪನ್ನಾಳೆ, ಸಚಿನ ರಾಠೋಡ್, ಕೇರಬಾ ಪವಾರ, ಶಿವರಾಜ ಅಲ್ಮಾಜೆ, ಖಂಡೋಬಾ ಕಂಗಟೆ, ಶಿವರಾಜ ಖಳೂರೆ, ಪ್ರದೀಪ ಪವಾರ, ಪ್ರಕಾಶ ಜೀರ್ಗೆ, ದಯಾನಂದ ಘೂಳೆ, ಬಾಲಾಜಿ ಠಾಕೂರ, ಕಲ್ಲಪ್ಪ ವಗ್ಗೆ, ನಾಗಶೆಟ್ಟಿ ಗಾದಗೆ, ಮಾದಪ್ಪ ಮಿಠಾರೆ, ಕಿರಣ ಶೆಂಬೆಳ್ಳಿ, ಯಶವಂತ ಪಾಟೀಲ, ರಾಮ ಬಿರಾದಾರ, ಅನೀಲ ಉಪ್ಪಾರ, ರಮೇಶ ಗೌಡಾ, ದಿಲೀಪ ಪಾಟೀಲ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net