

ಔರಾದ್: ಬಸವಾದಿ ಶರಣರ ತತ್ವಾದರ್ಶಗಳನ್ನು ಆಚರಣೆಯಲ್ಲಿ ತಂದರೆ ಬದುಕು ಸಮೃದ್ಧವಾಗಲಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ಸಂತಪುರದಲ್ಲಿ ಏರ್ಪಡಿಸಿದ್ದ 87ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, 12ನೇ ಶತಮಾನದ ಶರಣರು ನಮಗೆ ಹಾಕಿಕೊಟ್ಟ ಜೀವನದ ಸರಳ ಆಚರಣೆ ಮಾರ್ಗವನ್ನು ಅನುಸರಿಸಬೇಕು ಎಂದರು.
ಆಡಂಬರ, ಡಂಬಾಚಾರದ ಭಕ್ತಿಯಿಂದ ಪರಮಾತ್ಮ ಒಲಿಯುವುದಿಲ್ಲ. ಅಂಗವೇ ಭೂಮಿಯಾಗಿ, ಲಿಂಗವೇ ಬೆಳೆಯಾಗಿ, ವಿಶ್ವಾಸವೆಂಬ ಭತ್ತ ಬಿತ್ತಿ ಬೆಳೆದು ಸುಖಿಯಾಗಬೇಕೆಂದು ಒಕ್ಕಲಿಗ ಕಾಯಕ ಮಾಡುವ ಶರಣ ಮುದ್ದಣ್ಣ ತಮ್ಮ ವಚನದಲ್ಲಿ ಬಹು ಸುಂದರ ಮಾತನ್ನು ಹೇಳಿದ್ದಾರೆ. ಹೀಗಾಗಿ ವಿಶ್ವಾಸವಿಟ್ಟು ಕೆಲಸ ಮಾಡಬೇಕು ಎಂದು ಹೇಳಿದರು.
ಅನುದಾನಿತ ಪದವಿಪೂರ್ವ ಕಾಲೇಜು ನೌಕರರ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ ಕೆ.ಪಾಟೀಲ್, ಡಾ.ಪ್ರವೀಣ ಬ್ಯಾಳೆ ಮಾತನಾಡಿದರು. ರಾಜ್ಯ ಸಕರ್ಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ್ ಚಿದ್ರಿ ಉದ್ಘಾಟಿಸಿದರು. ಅನುಭವ ಮಂಟಪ ಸಂತಪುರ ಅಧ್ಯಕ್ಷ ಬಸವರಾಜ ಬಿರಾದಾರ್ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಪಂಢರಿ ಆಡೆ, ಸುನೀಲ ಕಸ್ತೂರೆ, ಗಣೇಶ ಬ್ಯಾಳೆ, ಓಂಕಾರ ಬ್ಯಾಳೆ ಇತರರನ್ನು ಸನ್ಮಾನಿಸಲಾಯಿತು. ಲಾವಣ್ಯ ಸೋಮಶೇಖರ, ಗೋವಿಂದರಡ್ಡಿ, ಹಾವಗಿರಾವ ಶೆಂಬೆಳ್ಳಿ, ಬಸವರಾಜ ಪಾಟೀಲ್, ನಾಗಶೆಟ್ಟಿ ಬಿಜಲವಾಡೆ, ವಿಜಯಕುಮಾರ ನಿಟ್ಟೂರೆ ಇತರರಿದ್ದರು. ಶಿವಕುಮಾರ ಹಿರೇಮಠ ಸ್ವಾಗತಿಸಿದರು. ಸಂಗಮೇಶ ಬ್ಯಾಳೆ ನಿರೂಪಣೆ ಮಾಡಿದರು. ಶಿವಕಾಂತ ಸ್ವಾಮಿ ವಂದಿಸಿದರು.