

ಚಿಟಗುಪ್ಪ: ಮೀನಕೇರಾ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್)ದ ಆಡಳಿತ ಮಂಡಳಿಯ 12 ನಿರ್ದೇಶಕರ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಜ.12ರಂದು ಚುನಾವಣೆ ನಿಗದಿಯಾಗಿತ್ತು. 12 ಸ್ಥಾನಕ್ಕೆ 25 ನಾಮಪತ್ರ ಸಲ್ಲಿಕೆಯಾಗಿದ್ದವು. 13 ಜನ ನಾಮಪತ್ರ ವಾಪಸ್ ಪಡೆದಿದ್ದರಿಂದ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಬಾಬುರಾವ ಜಾಂತಿಕರ್ ಘೋಷಿಸಿದರು.
ಆಯ್ಕೆಯಾದ ನಿರ್ದೇಶಕರಾದ ರಾಚಪ್ಪ ಶೇರಿಕಾರ, ಮೈರೂನಾ ನಬಿಸಾಬ್, ಕಂಟೆಪ್ಪ ಹೂಗಾರ, ಗೌರೀಶ್ ಕಿರಣ, ಗುಂಡಪ್ಪ ಮೂಲಗಿ, ರೇವಮ್ಮ ಶಂಕರ ಭಂಗಿ, ಶಾಂತಮ್ಮ ಶಿವರಾಜ ಬೋಕಿ, ಲೋಕೇಶ್ ಉಪಾರ, ಶಿವಕುಮಾರ ಜುನ್ನಾ, ಈರಮ್ಮ ಬಸವರಾಜ ಗ್ಯಾನಪ್ಪ, ಕಸ್ತೂರಬಾಯಿ ಶರಣಯ್ಯ ಸ್ವಾಮಿ, ರಾಹುಲ್ ಮಾಲಿಪಾಟೀಲ್ ಅವರನ್ನು ಸಂಘದ ಕಚೇರಿಯಲ್ಲಿ ಸ್ಥಳೀಯರು ಸನ್ಮಾನಿಸಿ ಅಭಿನಂದಿಸಿದರು.