ಬಾಯಲ್ಲಿ ನೀರೂರಿಸಿದ ಖಾದ್ಯಗಳು

College Food Mela
Published on

ಬೀದರ್: ‘ಯುವ ಸವಿ ಸಂಗಮ’ ಶೀರ್ಷಿಕೆಯಡಿ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಆಹಾರ ಮೇಳವು ನೆರೆದವರ ಬಾಯಲ್ಲಿ ನೀರೂರಿಸಿತು.

ಮೇಳದಲ್ಲಿ ವಿದ್ಯಾರ್ಥಿಗಳು ಪಾನಿ ಪುರಿ, ಬೇಲ್ ಪುರಿ, ಗೋಬಿ ಮಂಚೂರಿ, ಸಾಬುದಾನ ವಡಾ, ಪೇಡಾ, ರಾಗಿ ಬಿಸ್ಕತ್, ಬೆಲ್ಲದ ಚಹಾ ಸೇರಿದಂತೆ 20ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆದಿದ್ದರು. ವಿದ್ಯಾರ್ಥಿಗಳು, ಪಾಲಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಖಾದ್ಯಗಳನ್ನು ಖರೀದಿಸಿ, ಅವುಗಳ ರುಚಿ ಸವಿದರು.

ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಕೌಶಲ ಬೆಳೆಸಲು ಆಹಾರ ಮೇಳ ಆಯೋಜಿಸಲಾಗಿದೆ ಎಂದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯೆ ಡಾ. ಜೈಶ್ರೀ ಪ್ರಭಾ ಹೇಳಿದರು.

ನಿವೃತ್ತ ಪ್ರಾಚಾರ್ಯ ಎಂ.ಜಿ. ದೇಶಪಾಂಡೆ ಉದ್ಘಾಟಿಸಿದರು. ದಾನಾಪಾನಿ ಹೊಟೇಲ್ ಮಾಲೀಕ ಮಹೇಶ ಚಂದಾಪುರೆ, ಪ್ರೊ. ಚೆನ್ನಕೇಶವ ಮೂರ್ತಿ, ಶ್ರೀಕಾಂತ ಪಾಟೀಲ, ಸಪ್ನಾ, ನಗ್ಮಾ, ಬಸವರಾಜ ರಾಜೋಳಿ, ಡಾ. ಪ್ರಕಾಶ, ಸಂಜುಕುಮಾರ, ಪ್ರೊ. ಶಂಕರರಾವ್ ಗಣಗೊಂಡ, ಡಾ. ರಾಜಕುಮಾರ ಅಲ್ಲೂರೆ, ಪ್ರೊ. ಪ್ರೇಮಲತಾ ಇದ್ದರು.

ಕಾಲೇಜಿನ ಸಾಂಸ್ಕøತಿಕ ಸಂಚಾಲಕ ಯಲೀಷ್ ದೇವಿದಾಸ ಸ್ವಾಗತಿಸಿದರು. ಡಾ. ಮಹಾದೇವಿ ಹೆಬ್ಬಾಳೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net