

ಬೀದರ್: ಇಲ್ಲಿಯ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಸಂಗಪ್ಪ ಕೆ. ರಾಜೇಶ್ವರ ಅವರಿಗೆ ಕಾನಪುರದ ಛತ್ರಪತಿ ಶಾಹು ಮಹಾರಾಜ್ ವಿಶ್ವವಿದ್ಯಾಲಯ ಪಿಎಚ್.ಡಿ ನೀಡಿದೆ.
‘ಎಲೆಕ್ಟ್ರೊಕೆಮಿಕಲ್ ಆ್ಯಂಡ್ ಥರ್ಮಲ್ ಬಿಹೆವಿಯರ್ ಆಫ್ ಲಿಥಿಯಂ ಅಯಾನ್ ಗ್ರಾಫಿಟಿಕ್ ಅನೋದ್ ವಿಥ್ ನ್ಯಾನೊ ಕಂಡಕ್ಟಿಂಗ್ ಅಡ್ಡಿಟಿವ್ಸ್’ ಕುರಿತು ಅವರು ಮಂಡಿಸಿದ ಪ್ರೌಢಪ್ರಬಂಧವನ್ನು ವಿಶ್ವವಿದ್ಯಾಲಯ ಪಿಎಚ್‍ಡಿಗೆ ಮಾನ್ಯ ಮಾಡಿದೆ. ಈಚೆಗೆ ನಡೆದ ಸಮಾರಂಭದಲ್ಲಿ ಪಿಎಚ್‍ಡಿ ಪ್ರದಾನ ಮಾಡಲಾಯಿತು. ಸಂಗಪ್ಪ ರಾಜೇಶ್ವರ ಅವರಿಗೆ ಪಿಎಚ್‍ಡಿ ಲಭಿಸಿದ್ದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.