ಹವಾ ಮಲ್ಲಿನಾಥ ಶ್ರೀಗೆ ರಾಷ್ಟ್ರ ಸಂತ ಪದವಿ ಕೊಡಿ

hawa mallinath
Published on

ಬೀದರ್: ಜೈ ಭಾರತ ಮಾತಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಹವಾ ಮಲ್ಲಿನಾಥ ಮಹಾರಾಜರ ರಾಷ್ಟ್ರ ಭಕ್ತಿಯನ್ನು ಗೌರವಿಸುವ ನಿಟ್ಟಿನಲ್ಲಿ ರಾಷ್ಟ್ರ ಸಂತ ಪದವಿ ನೀಡುವಂತೆ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಆಗ್ರಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿ, ಕಲಬುರಗಿ ಜಿಲ್ಲೆ ನಿರಗುಡಿಯಲ್ಲಿ ಜನಿಸಿದ ಪೂಜ್ಯರು ತಮ್ಮ ಜೀವನವನ್ನು ಜನಕಲ್ಯಾಣ ಹಾಗೂ ರಾಷ್ಟ್ರ ಸೇವೆಗೆ ಮುಡಿಪಾಗಿಟ್ಟಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದಿಂದ ರಾಷ್ಟ್ರ ಸಂತ ಪದವಿ ನೀಡಿ ಗೌರವಿಸಬೇಕೆಂದು ಒತ್ತಾಯಿಸಿದ್ದಾರೆ.

ಶ್ರೀಗಳು 6ನೇ ವಯಸ್ಸಿಗೆ ಮನೆ ಬಿಟ್ಟು ಸಂಚರಿಸುತ್ತಿದ್ದಾರೆ. ಮಾನವೀಯತೆ, ಅಧ್ಯಾತ್ಮ, ದೇಶಭಕ್ತಿ ಕುರಿತು ಪ್ರಸಾರ ಮಾಡುತ್ತಿದ್ದಾರೆ. ಪೂಜ್ಯರು ಒಂದು ಮಠಕ್ಕೆ ಸೀಮಿತವಾಗದೆ ದೇಶಾದ್ಯಂತ 5000ಕ್ಕೂ ಹೆಚ್ಚು ಶಿವಮಂದಿರ ನಿರ್ಮಿಸಿದ್ದಾರೆ. ಜಾತಿ, ಮತ, ಧರ್ಮ ಎನ್ನದೆ ಮೊದಲು ದೇಶ ನಂತರ ಎಲ್ಲ ತತ್ವವನ್ನು ಬೋಧನೆ ಮಾಡುತ್ತಿದ್ದಾರೆ. ಐದು ದಶಕದಿಂದ ದೇಶದ ಏಕತೆ, ಅಖಂಡತೆಗಾಗಿ ನಿರಂತರ ದೇಶಾದ್ಯಂತ ಸಂಚರಿಸಿ ಜಾಗೃತಿ ಮೂಡಿಸುತ್ತಿರುವುದರಿಂದ ರಾಷ್ಟ್ರ ಸಂತ ಪದವಿ ನೀಡಿ ಗೌರವಿಸುವ ಅಗತ್ಯವಿದೆ ಎಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net