ಭಕ್ತಿ ಮಾರ್ಗದ ಬೋಧಕ ಸಿದ್ಧೇಶ್ವರ ಸ್ವಾಮೀಜಿ

Bhalki Math
Published on

ಭಾಲ್ಕಿ: ನಡೆ-ನುಡಿ ಒಂದಾಗಿಸಿಕೊಂಡಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಭಕ್ತಿ ಮತ್ತು ಶಾಂತಿ ಮಾರ್ಗದ ಬೋಧಕರಾಗಿದ್ದರು ಎಂದು ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಏರ್ಪಡಿಸಿದ್ದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ದ್ವಿತೀಯ ಸ್ಮರಣೋತ್ಸವದಲ್ಲಿ ಮಾತನಾಡಿದ ಅವರು, ಪ್ರವಚನ ಮೂಲಕ ಕೋಟ್ಯಂತರ ಭಕ್ತರ ಮನಸ್ಸುಗಳನ್ನು ಅರಳಿಸಿ ಜೀವನದಲ್ಲಿ ಶಾಂತಿ, ನೆಮ್ಮದಿ ಉಂಟು ಮಾಡಿದ್ದ ಪೂಜ್ಯರ ನಡೆ ಎಲ್ಲರಿಗೆ ಮಾದರಿಯಾಗಿದೆ ಎಂದರು.

ಪೂಜ್ಯರು ಹೆಚ್ಚು ದಿನ ಪ್ರವಚನ ಮಾಡಿದ್ದು ಭಾಲ್ಕಿ ಚನ್ನಬಸವಾಶ್ರಮದಲ್ಲಿ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಪ್ರವಚನ ಮೂಲಕ ವಿಶ್ವಕ್ಕೆ ಜ್ಞಾನ ಪ್ರಸಾರ ಮಾಡಿ ಶತಮಾನದ ಸಂತ, ನಡೆದಾಡುವ ದೇವರು, ಸರಳತೆಯ ಸಾಕಾರಮೂರ್ತಿ ಎನಿಸಿಕೊಂಡರು. ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸೇವಾಕಾರ್ಯಗಳ ಬಗ್ಗ ಪೂಜ್ಯರಿಗೆ ಅಪಾರ ಗೌರವವಿತ್ತು. ಭಾಲ್ಕಿ ಮಠದ ಸಾಧನೆ ನೋಡಿ ಬಹಳಷ್ಟು ಖುಷಿಪಟ್ಟಿದ್ದರು ಎಂದು ಸ್ಮರಿಸಿದರು.

ವಿದ್ಯಾವತಿ ಸೋಮನಾಥ ಅಷ್ಟೂರೆ, ಶುಭಾಂಗಿ ಚನ್ನಬಸವಣ್ಣ ಬಳತೆ, ಅಕ್ಷತಾ ಅಷ್ಟೂರೆ, ಉಮಾದೇವಿ ಖೇಳಗೆ, ಶರಣಪ್ಪ ಬಿರಾದಾರ್, ಶಿವಪುತ್ರ ದಾಬಶೆಟ್ಟಿ ಇತರರಿದ್ದರು. ದೀಪಕ ಠಮಕೆ ನಿರೂಪಣೆ ಮಾಡಿದರು. ಬಾಬು ಬೆಲ್ದಾಳ ವಂದಿಸಿದರು. ಐಶ್ವರ್ಯಾ ರವೀಂದ್ರ ವಚನ ಪ್ರಾರ್ಥನೆ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net