2025ನೇ ಸಾಲಿನ ದಿನದರ್ಶಿಕೆ ಬಿಡುಗಡೆ

Calender Opening Photo- Audumbarling Ashram
Published on

ಬೀದರ್: ಇಲ್ಲಿಯ ನೌಬಾದ್ ಸಮೀಪದ ಔದುಂಬರಲಿಂಗ ಆಶ್ರಮದಲ್ಲಿ ನಾಗೋರಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ಯಾಕತಪುರ ಹೊರ ತಂದಿರುವ 2025ನೇ ಸಾಲಿನ ದಿನದರ್ಶಿಕೆಯನ್ನು ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜ ಬಿಡುಗಡೆ ಮಾಡಿದರು.

ದಿನದರ್ಶಿಕೆ ಹಬ್ಬ, ಹರಿದಿನ, ರಜೆ, ಸಂಚಾರ ನಿಯಮಗಳ ಜಾಗೃತಿ ಬರಹಗಳನ್ನೂ ಒಳಗೊಂಡಿದೆ ಎಂದು ನರಸಪ್ಪ ಯಾಕತಪುರ ತಿಳಿಸಿದರು.

ಪ್ರಮುಖರಾದ ರಾಜು ಚಿಟ್ಟಾವಾಡಿ, ಬೊಮ್ಮಗೊಂಡ ಚಿಟ್ಟಾವಾಡಿ, ವಿಜಯಕುಮಾರ ಘೋಡಂಪಳ್ಳಿ, ಗೋಪಾಲ್ ಘೋಡಂಪಳ್ಳಿ, ಉಮೇಶ ರಾಯಗೊಂಡ, ಪ್ರಭು ಬುಗಟೆ, ರಾಕೇಶ್ ಸಾತೋಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net