ಜಿಲ್ಲಾದ್ಯಂತ ಜಾಗೃತಿ ಜಾದೂ

photo
Published on

ಬೀದರ್: ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಭಾರತ ವಿಕಾಸ ಸಂಗಮ, ವಿಕಾಸ ಅಕಾಡೆಮಿ ಹಾಗೂ ಫ್ಯೂಚರ್ ಕಿಡ್ಸ್ ಸ್ಕೂಲ್ ವತಿಯಿಂದ 3, 4ರಂದು ಜಿಲ್ಲೆಯಲ್ಲಿ ಜಾಗೃತಿ ಜಾದೂ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

28ರಿಂದ ಫೆ.6 ರವರೆಗೆ ಕಲಬುರಗಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಭಾರತೀಯ ಸಂಸ್ಕೃತಿ ಉತ್ಸವದ ಪ್ರಚಾರಾರ್ಥವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಂಗಳೂರಿನ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ ಜಿಲ್ಲೆಯ ನಾಲ್ಕು ಕಡೆ ಜಾದೂ ಪ್ರದರ್ಶನ ನೀಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ಧಪ್ಪ ಜಲಾದೆ ಹೇಳಿದರು.

3ರಂದು ಬೆಳಗ್ಗೆ 10ಕ್ಕೆ ಬಸವಕಲ್ಯಾಣ ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ, ಮಧ್ಯಾಹ್ನ 2ಕ್ಕೆ ಭಾಲ್ಕಿ ಪಟ್ಟಣದ ಗುರುಕೃಪಾ ಕಲ್ಯಾಣ ಮಂಟಪದಲ್ಲಿ ಜಾದೂ ಕಾರ್ಯಕ್ರಮ ಇದೆ. 4ರಂದು ಬೆಳಗ್ಗೆ 10ಕ್ಕೆ ಔರಾದ್ ಪಟ್ಟಣದ ನವಚೇತನ ಪಬ್ಲಿಕ್ ಶಾಲೆ ಹಾಗೂ ಸಂಜೆ 4.30ಕ್ಕೆ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಸಮಾರಂಭ ಇದೆ ಎಂದು ಹೇಳಿದರು.

ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗುರುನಾನಕ್ ದೇವ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಸರ್ದಾರ್ ಬಲಬೀರಸಿಂಗ್ ಉದ್ಘಾಟಿಸುವರು. ಮುನೀಶ್ ಲಾಖಾ, ಸತೀಶ್ ಪಾಟೀಲ್ ಇತರರು ಪಾಲ್ಗೊಳ್ಳಿದ್ದಾರೆ ಎಂದರು.

ಜಾದೂ ಕಾರ್ಯಕ್ರಮದ ಮೂಲಕ ಭಾರತಿಯ ಸಂಸ್ಕೃತಿ ಉತ್ಸವದ ಪ್ರಚಾರ ಕೈಗೊಂಡು, ಈ ಭಾಗದಲ್ಲಿ ವೈಚಾರಿಕ ಕ್ರಾಂತಿ ಮಾಡಲಾಗುತ್ತಿದೆ. ಹತ್ತು ದಿನ ನಡೆಯುವ ಉತ್ಸವದಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಚಿಂತಕರಿಂದ ಮಾರ್ಗದರ್ಶನ ನೀಡಲಾಗುತ್ತಿದೆ. ಗೋವಿಂದಾಚಾರ್ಯ ನೇತೃತ್ವದಲ್ಲಿ 10 ಸಾವಿರ ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಮುಖರಾದ ಬಿ.ಎಸ್. ಕುದರೆ, ಕರ್ನಲ್ ಶರಣಪ್ಪ ಸಿಕೆನಪುರೆ, ಸಂತೋಷ ಮಂಗಳೂರೆ, ಗಣೇಶ ಹಡಪದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net