

ಬೀದರ್: ಕೃಷಿಕ ಸಮಾಜದ ಬೀದರ್ ತಾಲೂಕು ಅಧ್ಯಕ್ಷರಾಗಿ ಸಿದ್ರಾಮಯ್ಯ ಎಸ್. ಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಸಹಾಯಕ ಕೃಷಿ ನಿರ್ದೇಶಕ ಕಚೇರಿಯಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಸೇರಿ ಐದು ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ನಡೆಯಿತು. ಎಲ್ಲ ಸ್ಥಾನಗಳಲ್ಲಿ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಅನ್ಸಾರಿ ಎಂ.ಎ.ಕೆ. ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ಮಹೇಶ ಚಿಂತಾಮಣಿ (ತಾಲೂಕು ಉಪಾಧ್ಯಕ್ಷ), ಶಿವಯ್ಯಾ ಸ್ವಾಮಿ (ಪ್ರಧಾನ ಕಾರ್ಯದರ್ಶಿ), ಸಂಜುಕುಮಾರ ಪಾಟೀಲ್ (ಖಜಾಂಚಿ), ದಯಾನಂದ ಸ್ವಾಮಿ (ಜಿಲ್ಲಾ ಪ್ರತಿನಿಧಿ) ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ 15 ಜನ ಇತ್ತೀಚೆಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಮುಂದಿನ ಐದು ವರ್ಷದ ಅವಧಿಗಾಗಿ ಈ ಆಯ್ಕೆ ನಡೆದಿದೆ.
ಅವಿರೋಧ ಆಯ್ಕೆ ನಂತರ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಸದಸ್ಯರಾದ ನಂದುಕುಮಾರ ಪಾಟೀಲ್, ವೈಜಿನಾಥ ಭುಯ್ಯಾ, ಶಂಕರರಾವ ಪಾಟೀಲ್, ಮಲ್ಲಿಕಾರ್ಜುನ ಹಚ್ಚಿ, ಮಹಾದೇವ ನಾಗೋರೆ, ಅನೀಲಕುಮಾರ ಅಟಂಗೆ, ನಾಗಯ್ಯಾ ಶಂಕ್ರಯ್ಯಾ, ನಾಗಯ್ಯಾ ಮಡಿವಾಳಯ್ಯಾ, ಮಹಾದೇವ ಸ್ವಾಮಿ, ಅಶೋಕ ಬಿರಾದಾರ್ ಇತರರಿದ್ದರು.