

ಭಾಲ್ಕಿ: ಜಾನುವಾರು, ಕುಕ್ಕುಟ ಮತ್ತು ಮೀನುಗಾರಿಕೆ ಮೇಳದ ಭಿತ್ತಿಪತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಬಿಡುಗಡೆಗೊಳಿಸಿದರು.
ಮೇಳವನ್ನು ಅದ್ದೂರಿಯಾಗಿ ಆಯೋಜನೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಚಿವ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪಶು ವೈದ್ಯಕೀಯ ಮಹಾವಿದ್ಯಾಲಯ ಡೀನ್ ಡಾ.ಎಂ.ಕೆ. ತಾಂದಳೆ, ಪಶು ವಿವಿ ವಿಸ್ತರ್ಣಾ ನಿರ್ದೇಶಕ ಡಾ.ಬಸವರಾಜ ಅವಟಿ, ಮೇಳದ ಪ್ರಚಾರ ಸಮಿತಿ ಅಧ್ಯಕ್ಷ ಚನ್ನಪ್ಪ ಗೌಡ ಬಿರಾದಾರ್, ಡಾ.ಬಿ.ವಿ. ಶಿವಪ್ರಕಾಶ ಡಾ.ದಿಲೀಪಕುಮಾರ, ಡಾ.ಗೌತಮ ಅರಳಿ ಇತರರಿದ್ದರು.