

ಭಾಲ್ಕಿ: ಜಾನುವಾರು, ಕುಕ್ಕುಟ ಮತ್ತು ಮೀನುಗಾರಿಕೆ ಮೇಳದ ಭಿತ್ತಿಪತ್ರಗಳನ್ನು ಇಲ್ಲಿನ ಹಿರೇಮಠ ಸಂಸ್ಥಾನದಲ್ಲಿ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಹ ಪೋಸ್ಟರ್ಗಳನ್ನು ಬಿಡುಗಡೆ ಮಾಡಿದರು. ಕೃಷಿ ಜತೆಗೆ ರೈತರು ಹೈನುಗಾರಿಕೆ ಸೇರಿದಂತೆ ಇನ್ನಿತರ ಉಪಕುಸುಬು ಮಾಡಬೇಕು. ಇದರಿಂದ ಆರ್ಥಿಕವಾಗಿ ಸಹಾಯವಾಗಲಿದೆ. ಮೇಳಕ್ಕೆ ರೈತರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು ಶ್ರೀಗಳು ಹೇಳಿದರು.
ಪಶು ವಿವಿ ವಿಸ್ತರ್ಣಾ ನಿರ್ದೇಶಕ ಡಾ.ಬಸವರಾಜ ಅವಟಿ ಮಾತನಾಡಿದರು. ಮೇಳದ ಪ್ರಚಾರ ಸಮಿತಿ ಅಧ್ಯಕ್ಷ ಚನ್ನಪ್ಪ ಗೌಡ ಬಿರಾದಾರ್, ಡಾ.ಬಿ.ವಿ. ಶಿವಪ್ರಕಾಶ ಡಾ.ದಿಲೀಪಕುಮಾರ, ಡಾ.ಗೌತಮ ಅರಳಿ ಇತರರಿದ್ದರು.